ಸಮ್ಮತಿಯ ಸೆಕ್ಸ್: ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಲು ಹೈಕೋರ್ಟ್ ಮನವಿ
ಸಮ್ಮತಿಯ ಸೆಕ್ಸ್: ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಲು ಹೈಕೋರ್ಟ್ ಮನವಿ
ಒಪ್ಪಿತ ದೈಹಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸನ್ನು ಈಗ ಇರುವ 18 ವರ್ಷದಿಂದ 16ಕ್ಕೆ ಇಳಿಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಲೈಂಗಿಕತೆ ಬಗ್ಗೆ ನಿರ್ಧಾರ ಕೈಗೊಳ್ಳಲು 16 ವರ್ಷದ ಯುವತಿ ಅರ್ಹಳು. ಅವಳಿಗೆ ಆ ವಯಸ್ಸಿನಲ್ಲಿ ಪ್ರೌಢಾವಸ್ಥೆ ಪ್ರಾಪ್ತವಾಗಿದ್ದು, ಸೆಕ್ಸ್ ಬಗ್ಗೆ ನಿರ್ಧರಿಸುವ ವಿವೇಚನೆ ಆಕೆಗೆ ಇದೆ ಎಂದು ನ್ಯಾಯಪೀಠ ಹೇಳಿದೆ.
ಸಹಮತದ ಲೈಂಗಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸನ್ನು 18ರಂದ 16ಕ್ಕೆ ಇಳಿಸಬಹುದಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟಿನ ಗ್ವಾಲಿಯರ್ ಪೀಠ ಕೇಂದ್ರಕ್ಕೆ ಸೂಚನೆ ನೀಡಿದೆ.
ಬಾಲಕಿಯ ಮೇಲಿನ ಅತ್ಯಾಚಾರ, ಗರ್ಭ ಧರಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಖಲಾದ ಎಫ್‌ಐಆರ್‌ನ್ನು ರದ್ದುಪಡಿಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೆಕ್ಸ್ ಬಗ್ಗೆ ಸಾಮಾಜಿಕ ಜಾಗೃತಿ ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾ ಜಾಗೃತಿಯಿಂದ ಹೆಣ್ಣಾಗಲೀ, ಗಂಡಾಗಲೀ 14 ವರ್ಷಕ್ಕೆ ಪ್ರೌಢಾವಸ್ಥೆಗೆ ಬರುತ್ತಾರೆ. ಚಿಕ್ಕವಯಸ್ಸಿನಲ್ಲೇ ಪ್ರೌಢಾವಸ್ಥೆಗೆ ಬರುವ ಅವರು ಪರಸ್ಪರ ಆಕರ್ಷಿತರಾಗಿ ಒಪ್ಪಿತ ದೈಹಿಕ ಸಂಬಂಧಕ್ಕೆ ಕಾರಣವಾಗುತ್ತದೆ. ಆದರೆ, ಸಮ್ಮತಿಯ ಸೆಕ್ಸ್‌ನಲ್ಲಿ ಹೆಣ್ಣಿನ ವಯಸ್ಸು 18 ಎಂದು ನಿಗದಿಪಡಿಸಿರುವುದರಿಂದ ಬಾಲಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಹಾಗಾಗಿ, ಕಾನೂನಿನ ತಿದ್ದುಪಡಿಯ ಮೂಲಕ ಈ ಅನ್ಯಾಯವನ್ನು ಸರಿಪಡಿಸಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.
.