ವಿಚ್ಚೇದಿತ ಪತ್ನಿ ಜೊತೆಗೆ ಆಕೆ ಸಾಕಿದ ನಾಯಿಗೂ ಜೀವನಾಂಶ: ಕೋರ್ಟ್ ಹೇಳಿದ್ದೇನು..?
ವಿಚ್ಚೇದಿತ ಪತ್ನಿ ಜೊತೆಗೆ ಆಕೆ ಸಾಕಿದ ನಾಯಿಗೂ ಜೀವನಾಂಶ: ಕೋರ್ಟ್ ಹೇಳಿದ್ದೇನು..?
ವಿಚ್ಚೇದನ ಪ್ರಕರಣದಲ್ಲಿ ವಿಚ್ಚೇದಿತ ಪತ್ನಿಗೆ ಗಂಡ ಜೀವನಾಂಶ ಕೊಡಬೇಕು. ಇದು ಸಹಜ ನ್ಯಾಯ. ಆದರೆ, ತನಗೆ ಜೀವನಾಂಶ ಕೊಡಬೇಕು, ಇದರ ಜೊತೆಗೆ ತಾನು ಸಾಕಿದ ನಾಯಿಗಳಿಗೂ ವಿಚ್ಚೇದಿತ ಗಂಡ ಜೀವನಾಂಶ ನೀಡಬೇಕು ಎಂದು ಮಹಿಳೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಘಟನೆ ಮುಂಬೈನ ಬಾಂದ್ರಾ ಕೋರ್ಟ್‌ನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯ ಜೊತೆಗೆ 1986ರಲ್ಲಿ ವಿವಾಹವಾಗಿದ್ದ ಮಹಿಳೆ ತನ್ನ 55ನೇ ವರ್ಷದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಬ್ಬರೂ ತಮ್ಮ ಪತಿ ಜೊತೆಗೆ ವಿದೇಶದಲ್ಲಿ ನೆಲೆಸಿದ್ದಾರೆ.
ಈ ಮಧ್ಯೆ, ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದ ಪತಿ ಆರ್ಥಿಕವಾಗಿ ನಷ್ಟ ಅನುಭವಿಸಿದರು. ಇದರಿಂದ ಹತಾಶೆಗೊಂಡ ಪತಿ, ತನ್ನ ಪತ್ನಿಗೆ ಕಿರುಕುಳ ನೀಡತೊಡಗಿದ್ದಲ್ಲದೆ, ಮನಸ್ತಾಪ ಬೆಳೆದಾಗ ಆಕೆಯಯನ್ನು ಬೆಂಗಳೂರಿನಿಂದ ಮುಂಬೈಗೆ ಕಳಿಸಿದ್ದಾನೆ. ಇನ್ನು ಒಟ್ಟಿಗೆ ಇರಲು ಸಾಧ್ಯವಿಲ್ಲ. ನಿನಗೆ ಬದುಕಲು ಬೇಕಾದ ಹಣವನ್ನು ಕಳಿಸುತ್ತೇನೆ ಎಂದೂ ಹೇಳಿರುತ್ತಾನೆ ಎಂಬುದನ್ನು ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದ ಪತ್ನಿ ಮಾನ್ಯ ನ್ಯಾಯಾಲಯಕ್ಕೆ ನಿವೇದನೆ ಮಾಡಿಕೊಂಡಿದ್ದಾರೆ.
ತನಗೆ 55 ವರ್ಷವಾಗಿದ್ದು, ಉದ್ಯೋಗವಿಲ್ಲ. ತನ್ನನ್ನು ಅವಲಂಬಿಸಿರುವ ಸಾಕು ನಾಯಿಗಳನ್ನು ಸಾಕುವುದೇ ಕಷ್ಟವಾಗಿದೆ. ಹಾಗಾಗಿ, ಪತಿಯಿಂದ ಜೀವನಾಂಶ ಕೋರಿದ್ದೇನೆ ಎಂದು ಕೋರ್ಟ್‌ಗೆ ಹೇಳಿಕೊಂಡಿದ್ದರು.
ಗಂಡ ನೀವು ಜೀವನಾಂಶದಲ್ಲಿ ತನ್ನ ಜೊತೆಗೆ ಸಾಕು ನಾಯಿಗಳಿಗೂ ಸೇರಿ ಪ್ರತಿ ತಿಂಗಳು ರೂ. 70,000/- ನೀಡುವಂತೆ ಗಂಡನಿಗೆ ನಿರ್ದೇಶಿಸುವಂತೆ ಕೋರಿಕೊಂಡಿದ್ದರು. ತನ್ನ ಪರಿತ್ಯಕ್ತ ಪತಿ ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಾಕ್ಷ್ಯವನ್ನೂ ಆಕೆ ಕೋರ್ಟ್‌ಗೆ ಒದಗಿಸಿದ್ದರು.
ಇದನ್ನು ಪರಿಗಣಿಸಿದ ಬಾಂದ್ರಾ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಸಿಂಗ್ ರಜಪೂತ್, ಪತ್ನಿ ಹಾಗೂ ಆಕೆ ಸಾಕಿದ ನಾಯಿಗಳಿಗೆ ಸೇರಿ ವಿಚ್ಚೇದಿತ ಪತಿ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಜನರು ಆರೋಗ್ಯಕರ ಜೀವನ ಮಾಡಲು ಸಾಕು ಪ್ರಾಣಿಗಳೂ ಸಹಾಯ ಮಾಡುತ್ತವೆ. ಹಾಗಾಗಿ, ವಿಚ್ಚೇದಿತ ಪತ್ನಿ ಜೊತೆಗೆ ಆಕೆ ಸಾಕುತ್ತಿರುವ ಮೂರು ಸಾಕು ನಾಯಿಗಳ ಪಾಲನೆಗೂ ಸೇರಿ ಮಾಸಿಕ ರೂ. 50,000/- ನೀಡುವಂತೆ ಆದೇಶ ಹೊರಡಿಸಿದೆ.
ಇದರಿಂದ ಪತಿ ಆಘಾತಕ್ಕೊಳಗಾಗಿದ್ದು, ವ್ಯವಹಾರದಲ್ಲಿ ನಷ್ಟು ಉಂಟಾಗಿರುವುದರಿಂದ ಪತ್ನಿಗೆ ಮಾತ್ರ ಜೀವನಾಂಶ ನೀಡಲು ಶಕ್ತ. ಸಾಕು ನಾಯಿಗಳಿಗೆ ಜೀವನಾಂಶ ಕೊಡಲು ಆದೇಶ ಹೊರಡಿಸಬಾರದು ಎಂದು ಮನವಿ ಮಾಡಿದ್ದಾರೆ.
ಆದರೆ, ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವುದಕ್ಕೆ ಯಾವುದೇ ಸಾಕ್ಷ್ಯ ನೀಡುವಲ್ಲಿ ಪತಿ ವಿಫಲವಾಗಿದ್ದು, ಅವರ ವಾದವನ್ನು ತಿರಸ್ಕರಿಸಿ ಪತ್ನಿ ಮತ್ತು ಆಕೆಯ ಸಾಕು ನಾಯಿಗಳಿಗೆ ಜೀವನಾಂಶ ನೀಡುವಂತೆ ಅದೇಶ ಹೊರಡಿಸಿದರು.