Consumer Ford Car Case: ಐಷಾರಾಮಿ ಕಾರಿನಲ್ಲಿ ದೋಷ: ಗ್ರಾಹಕನಿಗೆ ದೊರೆಯಿತು ಭರ್ಜರಿ ಪರಿಹಾರ! ಫೋರ್ಡ್ ಕಂಪೆನಿಗೆ ಸುಪ್ರೀಂ ಕೋರ್ಟ್ ಆದೇಶ
ಐಷಾರಾಮಿ ಕಾರಿನಲ್ಲಿ ದೋಷ: ಗ್ರಾಹಕನಿಗೆ ದೊರೆಯಿತು ಭರ್ಜರಿ ಪರಿಹಾರ! ಫೋರ್ಡ್ ಕಂಪೆನಿಗೆ ಸುಪ್ರೀಂ ಕೋರ್ಟ್ ಆದೇಶ
ಫೋರ್ಡ್‌ನ ಐಷಾರಾಮಿ ಕಾರು ಟೈಟಾನಿಯಮ್ ಎಂಡೀವರ್‌ನಲ್ಲಿ ಉತ್ಪಾದನಾ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಆ ಕಾರನ್ನು ಖರೀದಿಸಿದ ಗ್ರಾಹಕರಿಗೆ 42 ಲಕ್ಷ ರೂ. ಪರಿಹಾರ ನೀಡುವಂತೆ ಫೋರ್ಡ್ ಕಂಪೆನಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಖರೀದಿಸಿದ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಹಕರು ಪಂಜಾಬ್ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ತಮ್ಮ ದೂರನ್ನು ದಾಖಲಿಸಿದರು.
ಖರೀದಿಸಿದ ಕಾರಿನಲ್ಲಿ ತೈಲ ಸೋರಿಕೆ ಸಹಿತ ಆರಂಭದಿಂದಲೇ ಹಲವು ದೋಷಗಳು ಕಂಡುಬಂದಿದ್ದವು. ದೂರಿನ ವಿಚಾರಣೆ ನಡೆಸಿದ್ದ ರಾಜ್ಯ ಗ್ರಾಹಕರ ಆಯೋಗ, ಖರೀದಿದಾರರ ಕಾರಿನ ಎಂಜಿನ್‌ನ್ನು ಉಚಿತವಾಗಿ ಬದಲಾಯಿಸಿ ಕೊಡುವಂತೆ ಮತ್ತು ಅಲ್ಲಿವರೆಗೆ ದಿನವೊಂದಕ್ಕೆ ರೂ. 2000/- ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ರಾಷ್ಟ್ರೀಯ ಗ್ರಾಹಕರ ಆಯೋಗವೂ ಎತ್ತಿಹಿಡಿದಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕಾರು ಕಂಪೆನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಫೋರ್ಡ್ ಕಂಪೆನಿ ಎಂಜಿನ್ ಬದಲಾಯಿಸಿ ಗ್ರಾಹಕರಿಗೆ ಆ ಕಾರನ್ನು ನೀಡಿತ್ತು. ಆದರೂ, ಆ ಕಾರಿನ ದೋಷಗಳು ಹಾಗೆಯೇ ಉಳಿದಿವೆ. ಕಾರಿನ ಸುಲಲಿತ ಚಲಾವಣೆಗೆ ಅಡ್ಡಿಯಾಗುತ್ತಿದೆ ಎಂದು ದೂರುದಾರರು ಸುಪ್ರೀಂ ಕೋರ್ಟ್ ನ್ಯಾಯಪೀಠದ ಗಮನಕ್ಕೆ ತಂದರು.
ಈ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ, ಗ್ರಾಹಕರಿಗೆ 42 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿತು. ಜೊತೆಗೆ ಕಾರಿನ ವಿಮಾ ಬಾಬ್ತು 87000/- ಹೆಚ್ಚುವರಿಯಾಗಿ ನೀಡುವಂತೆ ಫೋರ್ಡ್ ಕಂಪೆನಿ ಆದೇಶಿಸಿತು.
ಪ್ರಕರಣ: ಫೋರ್ಡ್ ಇಂಡಿಯಾ ಪ್ರೈ. ಲಿ. Vs ಮೆಡಿಕಲ್ ಎಲಾಬರೇಟ್ ಕಾನ್ಸೆಪ್ಟ್ ಪ್ರೈ. ಲಿ.
ಸುಪ್ರೀಂ ಕೋರ್ಟ್,