-->
ನೂತನ ಸರ್ಕಾರಿ ಅಭಿಯೋಜಕರ ನೇಮಕ: ವಿವಿಧ ಪೀಠಗಳಿಗೆ ಸರ್ಕಾರಿ ವಕೀಲರ ನಿಯೋಜನೆ

ನೂತನ ಸರ್ಕಾರಿ ಅಭಿಯೋಜಕರ ನೇಮಕ: ವಿವಿಧ ಪೀಠಗಳಿಗೆ ಸರ್ಕಾರಿ ವಕೀಲರ ನಿಯೋಜನೆ

ನೂತನ ಸರ್ಕಾರಿ ಅಭಿಯೋಜಕರ ನೇಮಕ: ವಿವಿಧ ಪೀಠಗಳಿಗೆ ಸರ್ಕಾರಿ ವಕೀಲರ ನಿಯೋಜನೆ





ರಾಜ್ಯ ಸರ್ಕಾರವು ನೂತನ ರಾಜ್ಯ ಸರ್ಕಾರಿ ಅಭಿಯೋಜಕರು(SSP) ಹುದ್ದೆಗೆ ಇಬ್ಬರು ವಕೀಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.



ಬೆಂಗಳೂರಿನ ವಕೀಲರಾದ ಬಿ.ಎ. ಬೆಳ್ಳಿಯಪ್ಪ ಅವರನ್ನು SSP-1 ಹುದ್ದೆಗೆ ನೇಮಕ ಮಾಡಲಾಗಿದೆ. ವಿಜಯ ಕುಮಾರ ಮಜಗೆ ಅವರನ್ನು SSP-2 ಹುದ್ದೆಗೆ ನೇಮಕ ಮಾಡಲಾಗಿದೆ.

ಈ ಹುದ್ದೆ ಎರಡು ವರ್ಷಗಳ ವರೆಗೆ ಇಲ್ಲವೇ ಮುಂದಿನ ಆದೇಶದ ವರೆಗೆ ಇರಲಿದೆ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.



ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಕೋಶದ ಕಾರ್ಯದರ್ಶಿಯಾಗಿರುವ ವಕೀಲರಾದ ಬಿ.ಎನ್. ಜಗದೀಶ್ ಅವರನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ, ಧಾರವಾಡದ ಎಂ.ಬಿ. ಗುಂಡವಾಡೆ ಅವರನ್ನು ಕಲಬುರ್ಗಿ ಪೀಠದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಲಾಗಿದೆ.



ಧಾರವಾಡ ಮತ್ತು ಕಲ್ಬುರ್ಗಿ ಪೀಠದಲ್ಲಿ ಈ ಹಿಂದೆ ವಿ.ಎಂ. ಬಣಕಾರ್ ಮತ್ತು ಪ್ರಕಾಶ್ ಯೇಲಿ ಅವರು ರಾಜ್ಯ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ್ದರು.


ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿ ನಾರಾಯಣ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ನೂತನ ನೇಮಕಾತಿಗಳ ವಿವರವನ್ನು ನೀಡಲಾಗಿದೆ.



ಇದೇ ವೇಳೆ, ಈ ಹಿಂದೆ ಅಭಿಯೋಜಕರಾಗಿ ಇದ್ದ ಕಿರಣ್ ಎಸ್. ಜವಳಿ ಮತ್ತು ವಿ.ಎಸ್. ಹೆಗ್ಡೆ ಅವರಿಗೆ ಒಂದು ತಿಂಗಳ ನೋಟೀಸ್‌ಗೆ ಬಂದು ಒಂದು ತಿಂಗಳ ರೀಟೇನರ್ ಫೀ ಮಂಜೂರು ಮಾಡಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.


Ads on article

Advertise in articles 1

advertising articles 2

Advertise under the article