HIV, AIDS ಸೋಂಕಿತರಿಗೆ ಪದೋನ್ನತಿ, ಉದ್ಯೋಗ ನಿರಾಕರಿಸುವಂತಿಲ್ಲ: ಹೈಕೋರ್ಟ್ ತೀರ್ಪು
Wednesday, July 19, 2023
HIV, AIDS ಸೋಂಕಿತರಿಗೆ ಪದೋನ್ನತಿ, ಉದ್ಯೋಗ ನಿರಾಕರಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಏಡ್ಸ್ ಅಥವಾ ಎಚ್‌ಐವಿ ಸೋಂಕು ಇದೆ ಎಂದ ಮಾತ್ರಕ್ಕೆ ಅವರಿಗೆ ಉದ್ಯೋಗ ಅಥವಾ ಪದೋನ್ನತಿಯನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಓಮ್ ಪ್ರಕಾಶ್ ಶುಕ್ಲಾ ಮತ್ತು ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಎಲ್ಲರಂತೆ ಅವರೂ ನಾಗರಿಕರು. ಎಲ್ಲ ಪ್ರಜೆಗಳಿಗೆ ಇರಬೇಕಾದ ಹಕ್ಕು ಅವರಿಗೂ ಇದೆ. ಅವರಿಗೆ ಎಚ್‌ಐವಿ ಸೋಂಕು ಇದೆ ಎಂಬ ಕಾರಣಕ್ಕೆ ಉದ್ಯೋಗಾವಕಾಶಗಳನ್ನು ನಿರಾಕರಿಸುವಂತಿಲ್ಲ. ಇಲ್ಲವೇ ನೌಕರಿಗೆ ಸಂಬಂಧಿತ ವಿಷಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣ: X (ಹೆಸರು ಪ್ರಕಟಿಸಿಲ್ಲ) Vs ಭಾರತ ಸರ್ಕಾರ
ಅಲಹಾಬಾದ್ ಹೈಕೋರ್ಟ್, Dated: 06-07-2023