-->
ಕ್ರೈಂ ಮಾಹಿತಿ ಇದೆ ಎಂದ ಮಾತ್ರಕ್ಕೆ ಪತ್ರಕರ್ತನ ಮೊಬೈಲ್ ಪೊಲೀಸರ ವಶಪಡಿಸಬಹುದೇ..?: ಹೈಕೋರ್ಟ್ ಹೇಳಿದ್ದೇನು...?

ಕ್ರೈಂ ಮಾಹಿತಿ ಇದೆ ಎಂದ ಮಾತ್ರಕ್ಕೆ ಪತ್ರಕರ್ತನ ಮೊಬೈಲ್ ಪೊಲೀಸರ ವಶಪಡಿಸಬಹುದೇ..?: ಹೈಕೋರ್ಟ್ ಹೇಳಿದ್ದೇನು...?

ಕ್ರೈಂ ಮಾಹಿತಿ ಇದೆ ಎಂದ ಮಾತ್ರಕ್ಕೆ ಪತ್ರಕರ್ತನ ಮೊಬೈಲ್ ಪೊಲೀಸರ ವಶಪಡಿಸಬಹುದೇ..?: ಹೈಕೋರ್ಟ್ ಹೇಳಿದ್ದೇನು...?





ಅಪರಾಧಿಕ ಘಟನೆಯ ಮಾಹಿತಿ ಇದೆ ಎಂದ ಮಾತ್ರಕ್ಕೆ ಪತ್ರಕರ್ತರೊಬ್ಬರ ಮೊಬೈಲ್‌ ಫೋನನ್ನು ಪೊಲೀಸರು ನಿಯಮವನ್ನು ಉಲ್ಲಂಘಿಸಿ ವಶಪಡಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.



ಜಿ. ವಿಶಾಖನ್ Vs ಕೇರಳ ಸರ್ಕಾರ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾ. ಪಿ.ವಿ. ಕುಂಞಕೃಷ್ಣನ್, ಅಪರಾಧ ಪ್ರಕರಣದ ತನಿಖೆಯಲ್ಲಿ ಅಗತ್ಯವಿದ್ದರೆ ಮಾತ್ರ ಅಪರಾಧಿಕ ಪ್ರಕ್ರಿಯಾ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ ಬಳಿಕವಷ್ಟೇ ಪತ್ರಕರ್ತರ ಫೋನ್‌ ವಶಕ್ಕೆ ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತು.



ಪತ್ರಿಕಾ ರಂಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ತಂಬ. ಪತ್ರಕರ್ತರಿಗೆ ಎಲ್ಲ ವಿಧದ ಹಲವು ರೀತಿಯ ಮಾಹಿತಿಗಳು ಲಭ್ಯವಾಗಬಹುದು. ಅದೆಲ್ಲವನ್ನೂ ಪೊಲೀಸರೊಂದಿಗೆ ಹಂಚಿಕೊಳ್ಳಲಾಗದು. ಹಾಗಾಗಿ, ಅಪರಾಧ ಪ್ರಕರಣ ಪ್ರಕರಣದ ಮಾಹಿತಿ ಇದೆ ಎಂಬ ಏಕೈಕ ಕಾರಣಕ್ಕೆ ಫೋನ್ ವಶ ಪಡಿಸಿಕೊಳ್ಳಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.



ಪತ್ರಕರ್ತರು ತಮಗೆ ತಿಳಿದ, ಹೇಳಿದ, ಕೇಳಿದ ಮಾಹಿತಿಗಳೆಲ್ಲವನ್ನೂ ಸುದ್ದಿ ಮಾಡಲು ಸಾಧ್ಯವಿಲ್ಲ. ಅದು ನೈಜ ಪತ್ರಿಕೋದ್ಯಮವೂ ಅಲ್ಲ. ಯಾವ ಸುದ್ದಿಯನ್ನು ಪ್ರಸಾರ ಮಾಡಬೇಕು ಎಂಬ ಅರಿವು, ಜವಾಬ್ದಾರಿ ಅವರಿಗೂ ಇರುತ್ತದೆ. ಅದೇ ರೀತಿ ಪೊಲೀಸರೂ ಮನಬಂದಂತೆ ಪತ್ರಕರ್ತರ ಫೋನ್‌ನ್ನು ಅಗತ್ಯ ನಿಯಮ ಪಾಲಿಸದೆ ವಶಪಡಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.



ಸದ್ರಿ ಪ್ರಕರಣದಲ್ಲಿ ಸೆಕ್ಷನ್ 41ಎ ಪ್ರಕಾರ ನೋಟೀಸ್ ನೀಡದೆ ಮಂಗಳಂ ದೈನಿಕದ ಪತ್ರಕರ್ತ ವಿಶಾಖನ್ ಮನೆಗೆ ಪ್ರವೇಶಿಸಿದ ಪೊಲೀಸರು ಯಾವುದೇ ಮಾಹಿತಿ ನೀಡದೆ ಒಂದು ಗಂಟೆಗೂ ಹೆಚ್ಚು ಹೊತ್ತು ಮನೆಯನ್ನು ಜಾಲಾಡಿದ್ದರು. ಶಾಸಕರಿಬ್ಬರ ಪ್ರಲೋಭನೆಯಿಂದ ಪೊಲೀಸರು ಈ ಕೃತ್ಯ ನಡೆಸಿದ್ದರು ಎಂದು ಆಪಾದಿಸಲಾಗಿದೆ. ಪೊಲೀಸರ ವರ್ತನೆಗೆ ಹೈಕೋರ್ಟ್ ತೀವ್ರವಾಗಿ ಛೀಮಾರಿ ಹಾಕಿತು.


Ads on article

Advertise in articles 1

advertising articles 2

Advertise under the article