-->
NI Act: ಚೆಕ್ ಅಮಾನ್ಯ ಪ್ರಕರಣದಲ್ಲಿ ಎರಡನೇ ಲೀಗಲ್ ನೋಟೀಸ್ ನೀಡಬಹುದೇ..? ದೂರು ಸಿಂಧುತ್ವವೇ..?

NI Act: ಚೆಕ್ ಅಮಾನ್ಯ ಪ್ರಕರಣದಲ್ಲಿ ಎರಡನೇ ಲೀಗಲ್ ನೋಟೀಸ್ ನೀಡಬಹುದೇ..? ದೂರು ಸಿಂಧುತ್ವವೇ..?

NI Act: ಚೆಕ್ ಅಮಾನ್ಯ ಪ್ರಕರಣದಲ್ಲಿ ಎರಡನೇ ಲೀಗಲ್ ನೋಟೀಸ್ ನೀಡಬಹುದೇ..? ದೂರು ಸಿಂಧುತ್ವವೇ..?





ಚೆಕ್ ಅಮಾನ್ಯ ಪ್ರಕರಣದಲ್ಲಿ ತಿಳುವಳಿಕಾ ನೋಟೀಸ್ ಅತ್ಯಂತ ಮಹತ್ವ ಪಡೆದಿದೆ. ಚೆಕ್ ಅಮಾನ್ಯಗೊಂಡ ಒಂದು ತಿಂಗಳಿನ ಒಳಗೆ ಈ ನೋಟೀಸ್‌ನ್ನು ಚೆಕ್ ನೀಡಿದವರಿಗೆ ಕಳುಹಿಸಬೇಕಾದದ್ದು ಕಾನೂನಿನ ಅಗತ್ಯ.


ಆದರೆ, ಎರಡನೇ ಬಾರಿಗೆ ಲೀಗಲ್ ನೋಟೀಸ್ ಜಾರಿಗೊಳಿಸಬಹುದೇ..? ಈ ಪ್ರಶ್ನೆಗೆ ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಕಾರಾತ್ಮಕವಾಗಿ ಸ್ಪಷ್ಟಪಡಿಸಿದೆ. ನಿಗದಿತ ಅವಧಿಯೊಳಗೆ ಎರಡನೇ ಬಾರಿಯೂ ಲೀಗಲ್ ನೋಟೀಸ್ ಜಾರಿಗೊಳಿಸಬಹುದು ಎಂದು ನ್ಯಾ. ಎ.ಎನ್. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.


ಚೆಕ್ ಅಮಾನ್ಯ ಪ್ರಕರಣದಲ್ಲಿ ನಿಗದಿತ ಕಾಲಮಿತಿಯಲ್ಲಿ ಯಾವುದೇ ಒಂದು ಚೆಕ್‌ನ್ನು ಎಷ್ಟು ಬಾರಿಯಾದರೂ ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಹಾಜರುಪಡಿಸಬಹುದು. ಅದೇ ರೀತಿ ಎರಡನೇ ತಿಳುವಳಿಕೆ ನೋಟೀಸ್‌ನ್ನೂ ನೀಡಬಹುದು. ಮತ್ತು ಎರಡನೇ ತಿಳುವಳಿಕಾ ನೋಟೀಸ್ ಅನ್ವಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ದೂರು ದಾಖಲಿಸಬಹುದು ಎಂದು ಈ ತೀರ್ಪಿನಲ್ಲಿ ಹೇಳಲಾಗಿದೆ.


ಪ್ರಕರಣದ ಹಿನ್ನೆಲೆ:

ಪ್ರಕರಣದ ಎದುರುವಾದಿಯು ಕಂಪೆನಿಯಾಗಿದ್ದು, ಈ ಸಂಸ್ಥೆಗೆ 15 ಕೋಟಿ ರೂ. ಸಾಲ ತೆಗೆಸಿಕೊಡುವುದಾಗಿ ಅರ್ಜಿದಾರರು 20.67 ಲಕ್ಷ ರೂ.ಗಳನ್ನು ಪಡೆದಿದ್ದರು. ಅದನ್ನು ಹಿಂತಿರುಗಿಸುವ ಭರವಸೆಯ ಮೇರೆಗೆ ತಲಾ 4 ಲಕ್ಷ ರೂ.ಗಳ ನಾಲ್ಕು ಚೆಕ್‌ಗಳನ್ನು ನೀಡಿದ್ದರು. ಉಳಿಕೆ 4.67 ಲಕ್ಷ ರೂ.ಗಳನ್ನು ನಗದಾಗಿ ನೀಡಿದ್ದರು. ನಿಗದಿತ ಅವಧಿಯಲ್ಲಿ ಚೆಕ್ ನಗದೀಕರಣಕ್ಕೆ ಹಾಜರುಪಡಿಸಿದಾಗ 'ನಿಧಿ ಕೊರತೆ' ಕಾರಣಕ್ಕೆ ಅಮಾನ್ಯಗೊಂಡಿತು. ಆ ಬಳಿಕ ಲೀಗಲ್ ನೋಟೀಸ್ ಜಾರಿಗೊಳಿಸಲಾಗಿತ್ತು.


ಆರೋಪಿ ಅರ್ಜಿದಾರರ ವಿನಂತಿ ಮೇರೆಗೆ ಚೆಕ್‌ನ್ನು ಮತ್ತೆ ನಗದೀಕರಣಕ್ಕೆ ಹಾಜರುಪಡಿಸಲಾಗಿ ಎರಡನೇ ಬಾರಿಯೂ ನಿಧಿಯ ಕೊರತೆ ಕಾರಣಕ್ಕೆ ಚೆಕ್ ಅಮಾನ್ಯಗೊಂಡಿತು. ಎರಡನೇ ಬಾರಿಯ ಅಮಾನ್ಯ ಪ್ರಕಾರ ಮತ್ತೊಮ್ಮೆ ಲೀಗಲ್ ಡಿಮ್ಯಾಂಡ್ ನೋಟೀಸ್ ಕಳಿಸಲಾಗಿತ್ತು.


ಈ ನೋಟೀಸ್‌ಗೆ ಆರೋಪಿತರು ಪ್ರತಿಕ್ರಿಯೆ ನೀಡದ ಕಾರಣ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದಶರತ್ ರೂಪ್ ಸಿಂಗ್ ರಾಥೋಡ್ Vs ಮಹಾರಾಷ್ಟ್ರ (2014 AIR SCW 4798) ಪ್ರಕರಣವನ್ನು ಉಲ್ಲೇಖಿಸಿ ದೂರನ್ನು ವಾಪಸ್ ಮಾಡಲಾಗಿತ್ತು. ಬಳಿಕ ಬೆಂಗಳೂರು ಹೆಚ್ಚುವರಿ ಸಿಎಂಎಂ ಕೋರ್ಟಿನಲ್ಲಿ ದೂರು ದಾಖಲಿಸಲಾಯಿತು.


ಆರೋಪಿ ಪರ ವಕೀಲರು ವಾದ ಮಂಡಿಸಿ ಮೊದಲನೇ ಬಾರಿ ಕಳುಹಿಸಿರುವ ಲೀಗಲ್ ಡಿಮ್ಯಾಂಡ್ ನೋಟೀಸ್ ಪ್ರಕಾರ ಸೆಕ್ಷನ್ 138 ಅನ್ವಯ ದೂರು ದಾಖಲಿಸಿಲ್ಲ. ಹಾಗಾಗಿ ಈ ದೂರನ್ನು ತಿರಸ್ಕರಿಸುವಂತೆ ಕೋರಿದ್ದರು. ಸದಾನಂದನ್ ಭದ್ರನ್ Vs ಮಾಧವನ್ ಸುನಿಲ್ ಕುಮಾರ್ (1998 6 SCC 514), ಎಸ್.ಎಲ್. ಕನ್‌ಸ್ಟ್ರಕ್ಷನ್ Vs ಅಲಪತಿ ಶ್ರೀನಿವಾಸ ರಾವ್ ಮತ್ತು ವೆಂಕಟೇಶ ಸುಬ್ಬು Vs ಜಯಾ ಭಾಸ್ಕರನ್ ಪ್ರಕರಣಗಳನ್ನು ಅವರು ಉಲ್ಲೇಖಿಸಿದ್ದರು.


ಸದಾನಂದನ್ ಭದ್ರನ್ ಪ್ರಕರಣದ ತೀರ್ಪನ್ನು ಓವರ್ ರೂಲ್ ಮಾಡಿ ಎಂ.ಎಸ್.ಆರ್. ಲೆದರ್ಸ್‌(ಸುಪ್ರಾ) ಪ್ರಕರಣದಲ್ಲಿ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ನ್ಯಾಯಪೀಠ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿತು.


ಚೆಕ್ ಸಿಂಧುತ್ವ ಕಳೆದುಕೊಳ್ಳುವ ತನಕ ಎರಡನೇ ಅಥವಾ ಹೆಚ್ಚುವರಿ ಅಮಾನ್ಯವಾದ ಘಟನೆಗೆ ಸೆಕ್ಷನ್ 138ರಡಿ ದೂರು ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟಿತು.


ಪ್ರಕರಣ: ಸುರೇಂದ್ರ ಕುಮಾರ್ Vs ಮೆ. ವರ್ಕೇಸ್ ರೀಟೇಲ್ ವೆಂಚರ್ಸ್ ಪ್ರೈ.ಲಿ.

ಕರ್ನಾಟಕ ಹೈಕೋರ್ಟ್, CrP 2550/2015 Dated: 28-04-2015

Ads on article

Advertise in articles 1

advertising articles 2

Advertise under the article