ದುಬಾರಿಯಾದ ಪೊಲೀಸ್ ಕಿರುಕುಳ: ವಕೀಲ ದಂಪತಿಗೆ 2.5 ಲಕ್ಷ ಪರಿಹಾರ ನೀಡಲು ಆದೇಶ
ದುಬಾರಿಯಾದ ಪೊಲೀಸ್ ಕಿರುಕುಳ: ವಕೀಲ ದಂಪತಿಗೆ 2.5 ಲಕ್ಷ ಪರಿಹಾರ ನೀಡಲು ಆದೇಶ
ವಕೀಲ ದಂಪತಿಗೆ ಪೊಲೀಸರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ದೂರು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ 2.5 ಲಕ್ಷ ರೂ. ಪರಿಹಾರ ನೀಡುವಂತೆ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ.
MORE ARTICLE
ಪೊಲೀಸರು ನಾಗರಿಕರೊಂದಿಗೆ ಸೌಜನ್ಯತೆಯಿಂದ ಇರಬೇಕು ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಯಮಿತವಾಗಿ ತರಗತಿಗಳನ್ನು ಆಯೋಜಿಸುವಂತೆ ಮಹಾರಾಷ್ಟ್ರರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ವಕೀಲೆ ಅಂಕಿತಾ ಶಾ ಮುಖೇಜಾ ಹಾಗೂ ಪತಿ ನಿಲೇಶ್ ಮುಖೇಜಾ ತಮಗೆ ಕಿರುಕುಳ ನೀಡಿದ್ದ ಪೊಲೀಸರ ವಿರುದ್ಧ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಬೀದಿ ನಾಯಿಗಳಿಗೆ ನೆರೆ ಮನೆಯವರು ಕಲ್ಲು ಹೊಡೆದು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ, ದೂರು ನೀಡಿದ ತಮಗೇ ಪೊಲೀಸರು ಹಿಂಸೆ ನೀಡಿದರು. ಠಾಣೆಗೆ ಕರೆಸಿ ಅಕ್ರಮ ಬಂಧನದಲ್ಲಿ ಇರಿಸಿದರು ಹಾಗೂ ಕಿರುಕುಳ ನೀಡಿದರು ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ಪೊಲೀಸರು ದೂರುದಾರರ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಆರು ವಾರಗಳಲ್ಲಿ 2.5 ರೂ.ಗಳನ್ನು ತಪ್ಪಿತಸ್ಥ ಪೊಲೀಸರಿಂದ ವಸೂಲು ಮಾಡಿ ಸಂತ್ರಸ್ತ ದೂರುದಾರರಿಗೆ ನೀಡಬೇಕು ಎಂದು ಆದೇಶ ನೀಡಿತು.