ಸುಪ್ರೀಂ ಕೋರ್ಟ್‌ನಲ್ಲಿ ಉಚಿತ ವೈಫೈ ಸೌಲಭ್ಯ: ವಕೀಲರು, ಪತ್ರಕರ್ತರು, ದಾವೆದಾರರು ಫುಲ್ ಖುಷ್!
Monday, July 3, 2023
ಸುಪ್ರೀಂ ಕೋರ್ಟ್‌ನಲ್ಲಿ ಉಚಿತ ವೈಫೈ ಸೌಲಭ್ಯ: ವಕೀಲರು, ಪತ್ರಕರ್ತರು, ದಾವೆದಾರರು ಫುಲ್ ಖುಷ್!
ಸುಪ್ರೀಂ ಕೋರ್ಟ್ ಮತ್ತೊಂದು ಮಹತ್ವಕಾಂಕ್ಷಿ ಯೋಜನೆಯಲ್ಲಿ ತನ್ನ ಆವರಣದಲ್ಲಿ ಉಚಿತ ವೈಫೈ ಸೇವಾ ಸೌಲಭ್ಯವನ್ನು ವಿಸ್ತರಿಸಿದೆ. ಈ ವೈಫೈ ಸೌಲಭ್ಯವನ್ನು ವಕೀಲರು, ಪತ್ರಕರ್ತರು, ದಾವೆದಾರರಿಗೆ ಉಚಿತವಾಗಿ ದೊರೆಯುವಂತೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ತನ್ನ ಡಿಜಿಟಲ್ ಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇರಿಸಿದೆ. ಇಲ್ಲಿಗೆ ಭೇಟಿ ನೀಡುವ ಎಲ್ಲರಿಗೂ ಈ ಸೌಲಭ್ಯ ಉಚಿತವಾಗಿ ದೊರೆಯಲಿದೆ.
ಮೊದಲ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್, ಸಂಖ್ಯೆ 2ರಿಂದ 5 ಕೋರ್ಟ್ ಹಾಲ್, ಕಾರಿಡಾರ್ ಹಾಗೂ ನ್ಯಾಯಾಲಯದ ಮುಂಭಾಗದ ಅಂಗಳ ಮತ್ತು ಮಾಧ್ಯಮ ಕೊಠಡಿಗೆ ಈ ಸೌಲಭ್ಯ ಲಭ್ಯವಿದೆ. ಇದನ್ನು ಇನ್ನೂ ಹಲವೆಡೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ತಿಳಿಸಿದೆ.
.