-->
ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌: ಡಿಲಿಟ್ ಮಾಡಿ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪದು !

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌: ಡಿಲಿಟ್ ಮಾಡಿ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪದು !

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌: ಡಿಲಿಟ್ ಮಾಡಿ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪದು !





ಇತ್ತೀಚೆಗೆ ದ್ವೇಷ, ಅಸೂಯೆ, ಅಸಭ್ಯ ಹಾಗೂ ಅಶ್ಲೀಲ ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ. ಅದಕ್ಕೆ ಬ್ರೇಕ್ ಹಾಕಲು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌ ಹಾಕುವವರ ನಿದ್ದೆಗೆಡಿಸುವ ತೀರ್ಪು ಹೊರಬಿದ್ದಿದೆ.



ಇನ್ಮುಂದೆ, ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌ ಅಥವಾ ಕಮೆಂಟ್ ಮಾಡಿ ಅದನ್ನು ಬಳಿಕ ಡಿಲಿಟ್ ಮಾಡಿ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪದು !



ಇಂತಹ ಒಂದು ಅಪರೂಪದ ಹಾಗೂ ಮಹತ್ವದ ತೀರ್ಪು ನೀಡಿದ್ದು ನ್ಯಾ. ಬಿ.ಆರ್. ಗವಾಯಿ ಹಾಗೂ ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ನ್ಯಾಯಪೀಠ.



ಮಹಿಳಾ ಪತ್ರಕರ್ತರೊಬ್ಬರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ತಮಿಳು ನಟ ಹಾಗೂ ಮಾಜಿ ಮಾಜಿ ಶಾಸಕ ಎಸ್.ವಿ. ಶೇಖರ್ ವಿರುದ್ಧ ದಾಖಲಾದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ.



ಪ್ರಕರಣವನ್ನು ರದ್ದುಪಡಿಸಲು ಕೋರಿ ಶೇಖರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ವಿಭಾಗೀಯ ಪೀಠ ಈ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದ್ದು, ಶೇಖರ್ ಅರ್ಜಿಯನ್ನು ತಿರಸ್ಕರಿಸಿದೆ.



ಆದರೆ, ಪ್ರಕರಣದ ವಿಚಾರಣೆ ವೇಳೆ, ಶೇಖರ್ ಅವರ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವ ಕೋರಿಕೆಗೆ ಸಮ್ಮತಿ ಸೂಚಿಸಿದೆ.


ಪ್ರಕರಣದ ವಿವರ

2018ರಲ್ಲಿ ಮಹಿಳಾ ಪತ್ರಕರ್ತರೊಬ್ಬರ ಬಗ್ಗೆ ಶೇಖರ್ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್‌ ಹಾಕಿದ್ದರು. ಆದರೆ, ಈ ಪೋಸ್ಟ್ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಡಿಎಂಕೆ ನಾಯಕರು ಶೇಖರ್ ರಾಜೀನಾಮೆಗೆ ಒತ್ತಾಯಿಸಿದ್ದರು. ಶೇಖರ್ ಆ ಬಳಿಕ ತಮ್ಮ ಪೋಸ್ಟ್‌ ಬಗ್ಗೆ ಕ್ಷಮೆ ಕೋರಿ ಜಾಲತಾಣದಿಂದ ಆ ಪೋಸ್ಟ್‌ನ್ನು ಡಿಲಿಟ್ ಮಾಡಿದ್ದರು.


ಪ್ರಕರಣ: ಎಸ್‌ವಿ ಶೇಖರ್ Vs ಎ.ಐ. ಗೋಪಾಲಸಾಮಿ (ಸುಪ್ರೀಂ ಕೋರ್ಟ್)


Ads on article

Advertise in articles 1

advertising articles 2

Advertise under the article