ಪೊಲೀಸ್ ಎರವಲು ಸೇವೆಗೆ ಮಿತಿ: ಪೊಲೀಸ್ ಮಹಾ ನಿರ್ದೇಶಕರ ಆದೇಶ
Monday, August 7, 2023
ಪೊಲೀಸ್ ಎರವಲು ಸೇವೆಗೆ ಮಿತಿ: ಪೊಲೀಸ್ ಮಹಾ ನಿರ್ದೇಶಕರ ಆದೇಶ
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಎರವಲು ಸೇವೆಯ ಅವಧಿಗೆ ಮಿತಿ ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಇನ್ನು ಮುಂದೆ ಈ ಅವಧಿ ಮೂರು ವರ್ಷಕ್ಕೆ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದ್ದು, ಸರ್ಕಾರದ ಸೂಚನೆಯಂತೆ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ.
ಎರವಲು ಸೇವೆಯ ಸಾಮಾನ್ಯ ಅವಧಿ ಮೂರು ವರ್ಷ ಪೂರ್ಣಗೊಂಡ ಬಳಿಕ ವಿಶೇಷ ಸಂದರ್ಭ ಅಥವಾ ವಿಶೇಷ ಕಾರಣ ಇದ್ದರೆ ಮಾಥ್ರ ಸೀಮಿತ ಸಾಮಾನ್ಯ ಅವಧಿಯನ್ನು ಪೊಲೀಸ್ ಪ್ರಧಾನ ಕಚೇರಿಯ ವಿಶೇಷ ಆದೇಶದ ಮೇರೆಗೆ ವಿಸ್ತರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗುಪ್ತಚರ ದಳ, ಸಿಐಡಿ, ಅರಣ್ಯ ಘಟಕ, ಲೋಕಾಯುಕ್ತ, ಕೆಪಿಟಿಸಿಎಲ್, ಬಿಡಿಎ, ಬಿಎಂಟಿಎಫ್, ಹೈಕೋರ್ಟ್, ಕೆಎಟಿ ಸಿಎಟಿ, ಡಿಸಿಆರ್‌ಇ, ಎಸ್‌ಸಿಆರ್‌ಬಿ ಸೇರಿದಂತೆ ವಿಶೇಷ ಘಟಕಗಳಿಗೆ ಪೊಲೀಸ್ ಇಲಾಖೆಯ ಎಸ್‌ಐ ಹಾಗೂ ಕೆಳ ಹಂತದ ಸಿಬ್ಬಂದಿಯನ್ನು ಎರವಲು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.