ಅನ್ಯ ಧರ್ಮೀಯರನ್ನು ಮದುವೆಯಾದರೆ ಆಸ್ತಿ ಹಕ್ಕು ಹೋಗುತ್ತದೆಯೇ..?
ಅನ್ಯ ಧರ್ಮೀಯರನ್ನು ಮದುವೆಯಾದರೆ ಆಸ್ತಿ ಹಕ್ಕು ಹೋಗುತ್ತದೆಯೇ..?
ಅನ್ಯ ಧರ್ಮೀಯರನ್ನು ಮದುವೆಯಾದರೆ ಆ ವ್ಯಕ್ತಿಗೆ ತನ್ನ ಹಿಂದಿನ ಕುಟುಂಬದಿಂದ ವಂಶವಾಹಿ ದೊರೆಯುವ ಆಸ್ತಿ ಹಕ್ಕು ಹೋಗುತ್ತದೆ ಎಂಬ ವಾದವನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಹಳೆಯ ಕಾನೂನುಗಳು ಪರಿಷ್ಕರಣೆಯಾಗಿವೆ. ಅನ್ಯ ಕೋಮಿನ ವ್ಯಕ್ತಿಯನ್ನು ವಿವಾಹವಾದರೆ ಕೂಡಲೇ ಅವರ ಆಸ್ತಿಯ ಹಕ್ಕುಗಳು ಹೋಗುತ್ತದೆ ಎಂಬ ವಾದಕ್ಕೆ ಕಾನೂನಿನ ಬಲ ಇಲ್ಲ ಎಂದು ನ್ಯಾ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಅನ್ಯ ಧರ್ಮೀಯರನ್ನು ಮದುವೆಯಾದರೆ ಆಸ್ತಿ ಹಕ್ಕು ನಶಿಸಿಹೋಗುತ್ತದೆ ಎಂಬ ವಾದವನ್ನು ಮಾಡಿದ ವಕೀಲರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವಕೀಲರು ವಾದ ಮಂಡಿಸುವ ಮುನ್ನ ಹೆಚ್ಚು ಅಧ್ಯಯನ ಮಾಡಬೇಕು. ಕಕ್ಷಿದಾರರಿಗೆ ಹೆಚ್ಚಿನ ಮಾಹಿತಿ ಇಲ್ಲದಿರಬಹುದು. ಆದರೆ, ವಕೀಲರಾಗಿ ಹೀಗೆ ವಾದ ಮಾಡಿದರೆ ಹೇಗೆ... ಎಂದು ಬೇಸರ ವ್ಯಕ್ತಪಡಿಸಿತು.
ಇದೇ ವೇಳೆ, ನ್ಯಾಯಾಧೀಶರ ವಿರುದ್ಧ ಎದುರುದಾರರು ಮಾಡಿದ್ದ ಟೀಕೆ ಕುರಿತಂತೆ ವಕೀಲರು ನ್ಯಾಯಪೀಠದ ಗಮನ ಸೆಳೆದಾಗ, ಟೀಕೆಗಳಿಗೆ ಸಮಯ ತೆಗೆಸಿಕೊಳ್ಳಲು ಸಮಯವಿಲ್ಲ ಎಂದು ನ್ಯಾಯಾಧೀಶರು ಖಡಕ್ ಉತ್ತರ ನೀಡಿದರು.
ನನಗೆ ಮಾಡುವುದಕ್ಕೆ ಅನೇಕ ಉತ್ತಮ ಕೆಲಸವಿದೆ ಎಂಬ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ನ್ಯಾ. ವಿ. ಶ್ರೀಶಾನಂದ, ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಕೆಲಸವನ್ನು ಹೀಗೆಯೇ ಮುಂದುವರಿಸಬೇಕು ಎಂದು ಹೇಳಿದರು.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರನ್ನು ಸ್ಮರಿಸಿದ ನ್ಯಾ. ಶ್ರೀಶಾನಂದ, ಅವರ ಹೇಳಿಕೆ ಎಲ್ಲರಿಗೂ ಮಾರ್ಗದರ್ಶಕ. ಟೀಕೆಗಳಿಗೆ ತಲೆಕೆಡಿಸಿಕೊಂಡು ನಮ್ಮ ಕೆಲಸದಿಂದ ವಿಚಲಿತರಾಗಬಾರದು. ನಮ್ಮ ಕೆಲಸದ ಬಗ್ಗೆ ಗಮನ ಹರಿಬೇಕು ಎಂದು ಹೇಳಿದರು.