ಸರ್ವೇ ಕಾರ್ಯಕ್ಕೆ ಲಂಚ ಪಡೆದ ಭೂಮಾಪಕನಿಗೆ 4 ವರ್ಷ ಜೈಲು, 50 ಸಾವಿರ ದಂಡ!
Thursday, August 31, 2023
ಸರ್ವೇ ಕಾರ್ಯಕ್ಕೆ ಲಂಚ ಪಡೆದ ಭೂಮಾಪಕನಿಗೆ 4 ವರ್ಷ ಜೈಲು, 50 ಸಾವಿರ ದಂಡ!
ಜಮೀನಿನ ಸರ್ವೇ ಕಾರ್ಯಕ್ಕೆ ಲಂಚ ಪಡೆದ ಭೂಮಾಪಕನಿಗೆ ವಿಚಾರಣಾ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿದ ಪ್ರಕರಣದ ಬೀದರ್‌ನಲ್ಲಿ ನಡೆದಿದೆ.
ಬಸವ ಕಲ್ಯಾಣದ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಭೂ ಮಾಪಕರಾಗಿರುವ ಅಬ್ದುಲ್ ರಹೀಂ ಬಡೇಸಾಬ್ ಜೈಲು ಶಿಕ್ಷೆಗೆ ಗುರಿಯಾಗಿರುವ ಅಧಿಕಾರಿಯಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(2) ಅಡಿ ಬೀದರ್‌ನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಕುಮಾರ್ ಎಂ. ಆನಂದ ಶೆಟ್ಟಿ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ಅಭಿಯೋಜನೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೇಶವ ರಾವ್ ಶ್ರೀಮಾಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು.
ತೀರ್ಪಿನಲ್ಲಿ ವಿಧಿಸಲಾದ ದಂಡವನ್ನು ಭರಿಸಲು ತಪ್ಪಿದರೆ ಹೆಚ್ಚುವರಿ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆಗೆ ಒಳಗಾಗುವಂತೆ ನ್ಯಾಯಾಲಯ ಆದೇಶ ನೀಡಿದೆ.