ಟ್ಯಾಕ್ಸಿ ಉದ್ಯಮ ನಡೆಸುತ್ತಿದ್ದ ವಕೀಲರಿಗೆ 1 ವರ್ಷ ನಿಷೇಧ: ಬಿಸಿಐ ಕ್ರಮವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಟ್ಯಾಕ್ಸಿ ಉದ್ಯಮ ನಡೆಸುತ್ತಿದ್ದ ವಕೀಲರಿಗೆ 1 ವರ್ಷ ನಿಷೇಧ: ಬಿಸಿಐ ಕ್ರಮವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನಗರದಲ್ಲಿ ಟ್ಯಾಕ್ಸಿ ಸೇವೆಯನ್ನು ನಡೆಸುತ್ತಿದ್ದ ವಕೀಲರ ವಿರುದ್ಧದ ಕ್ರಮವನ್ನು ಜರುಗಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಟ್ಯಾಕ್ಸಿ ಉದ್ಯಮ ನಡೆಸುತ್ತಿದ್ದ ವಕೀಲರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆ ವಕೀಲರ ಸನದ್ದನ್ನು ಒಂದು ವರ್ಷದ ಮಟ್ಟಿಗೆ ತಡೆಹಿಡಿದು ಒಂದು ವರ್ಷದ ವರೆಗೆ ವಕೀಲ ವೃತ್ತಿ ನಡೆಸದಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಅಭಯ ಶ್ರೀನಿವಾಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಇದು ವೃತ್ತಿ ಘನತೆಗೆ ತಕ್ಕುದ್ದಲ್ಲ. ಮತ್ತು ವೃತ್ತಿಗೆ ಚ್ಯುತಿ ತಂದ ಪ್ರಕರಣ ಎಂದು ನ್ಯಾಯಪೀಠ ಹೇಳಿದೆ.
ಬಿಸಿಐ ನಡೆಸಿದ ವಿಚಾರಣೆಯಲ್ಲಿ ವಕೀಲರ ಹೆಸರನಲ್ಲಿ ಟ್ಯಾಕ್ಸಿ ಪರ್ಮಿಟ್ ಇದ್ದ ಬಗ್ಗೆ ದಾಖಲೆಗಳನ್ನು ಒದಗಿಸಲಾಗಿತ್ತು. ಇದೇ ವೇಳೆ, ಸದ್ರಿ ಆರೋಪಿ ವಕೀಲರು ಪಕ್ಷಕಾರರ ಹಿತಾಸಕ್ತಿಗೆ ವಿರುದ್ಧವಾದ ಪಕ್ಷಕಾರರ ಪ್ರಕರಣಗಳಲ್ಲಿ ವಕಾಲತ್ತು ಹಾಕಿ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದರು.
ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ವಕೀಲರ ವಿರುದ್ಧ ಬಲವಾದ ಸಾಕ್ಷಿ ಇದ್ದ ಹಿನ್ನೆಲೆಯಲ್ಲಿ ವೃತ್ತಿಯಿಂದ ಒಂದು ವರ್ಷ ನಿಷೇಧ ಮಾಡಿ ಆದೇಶ ಹೊರಡಿಸಲಾಗಿತ್ತು.
ಬಿಸಿಐನ ಶಿಸ್ತು ಸಮಿತಿಯು ಸರಿಯಾದ ನಿರ್ಧಾರವನ್ನೇ ಮಾಡಿದೆ. ಶಿಸ್ತು ಸಮಿತಿಯ ಆದೇಶ ಸರಿಯಾಗಿಯೇ ಇರುವುದರಿಂದ ಈ ಆದೇಶಕ್ಕೆ ಮಧ್ಯಪ್ರವೇಶ ಮಾಡುವ ಯಾವುದೇ ಸಾಧ್ಯತೆಗಳು ಮತ್ತು ಅವಕಾಶಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.