ಪತ್ನಿ ಸಮ್ಮತಿಸಿದ್ದರೂ ಪತಿಯ ಎರಡನೇ ಮದುವೆ: ಕ್ರೌರ್ಯದ ದೂರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಪತ್ನಿ ಸಮ್ಮತಿಸಿದ್ದರೂ ಪತಿಯ ಎರಡನೇ ಮದುವೆ: ಕ್ರೌರ್ಯದ ದೂರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಮೊದಲ ಪತ್ನಿಯು ತನ್ನ ಗಂಡನ ಎರಡನೇ ಮದುವೆಗೆ ಸಮ್ಮತಿ ನೀಡಿದ್ದರೂ, ಮೊದಲ ಪತ್ನಿ ತನ್ನ ಗಂಡನ ವಿರುದ್ಧ ಕ್ರೌರ್ಯದ ದೂರು ಸಲ್ಲಿಸಬಹುದು ಎಂದು ಪಟ್ನಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್‌ನ ಪವನ್ ಕುಮಾರ್ ಭಜಂತ್ರಿ ಮತ್ತು ಜಿತೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪತಿ ತನ್ನ ಮೊದಲ ಪತ್ನಿಯ ಸಮ್ಮತಿಯನ್ನು ಪಡೆದು ಎರಡನೇ ಮದುವೆ ಮಾಡಿಕೊಂಡಿದ್ದರೂ ಎರಡನೇ ಮದುವೆ ಮಾಡಿಕೊಳ್ಳುವುದು ಮೊದಲ ಪತ್ನಿಯ ವಿರುದ್ಧ ಎಸಗುವ ಕ್ರೌರ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಮೇ 1978ರಲ್ಲಿ ಮದುವೆಯಾಗಿದ್ದ ಅರುಣ್ ಕುಮಾರ್ ತನ್ನ ಮೊದಲ ಪತ್ನಿಯ ಅನುಮತಿ ಪಡೆದುಕೊಂಡು 2004ರಲ್ಲಿ ಎರಡನೇ ಮದುವೆಯಾಗಿದ್ದರು. ಈ ಮದುವೆ 2005ರಲ್ಲಿ ಈ ಮದುವೆ ವಿಫಲವಾಗಿತ್ತು.
ಬಳಿಕ, 2010ರಲ್ಲಿ ಅರುಣ್ ಕುಮಾರ್ ತನಗೆ ಕ್ರೌರ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೊದಲ ಪತ್ನಿ ಸೆಕ್ಷನ್ 498A ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎಂಬುದನ್ನು ವಿಭಾಗೀಯ ಪೀಠ ಗಮನಿಸಿತು.
ಸಾಮಾನ್ಯವಾದ ಅರಿವಿನ ಪ್ರಕಾರ ಎರಡನೇ ಮದುವೆಯನ್ನು ಯಾವುದೇ ಪತ್ನಿ ಸಹಿಸುವುದಿಲ್ಲ. ಆದ್ದರಿಂದ ಎರಡನೇ ವಿವಾಹ ಆಗುವುದರಿಂದ ಆಕೆ ಪ್ರತ್ಯೇಕವಾಗಿ ವಾಸ ಮಾಡಬೇಕಾಗಿರುವುದರಿಂದ ಕ್ರೌರ್ಯಕ್ಕೆ ಸಮನಾಗಲಿದ್ದು, ಸೆಕ್ಷನ್ 498A ಅಡಿಯಲ್ಲಿ ಮೊಕದ್ದಮೆ ಹೂಡಲು "ವ್ಯಾಜ್ಯ ಕಾರಣ"ವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪತ್ನಿಯು ಸೆಕ್ಷನ್ 498A ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಮಾತ್ರಕ್ಕೆ ಕ್ರೌರ್ಯ ಉಂಟಾಗಿದೆ ಎಂದು ಹೇಳಲಾಗದು ಎಂಬುದನ್ನೂ ನ್ಯಾಯಪೀಠ ಹೇಳಿದೆ.
2017ರಲ್ಲಿ ಶೇಖ್ ಪುರ ಕೌಟುಂಬಿಕ ನ್ಯಾಯಾಲಯ ಇವರಿಬ್ಬರ ನಡುವಿನ ಮದುವೆಗೆ ವಿಚ್ಚೇದನ ನೀಡಲು ನಿರಾಕರಿ ವಿಚ್ಚೇದನ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಪ್ರಕರಣ: ಅರುಣ್ ಕುಮಾರ್ ಸಿಂಗ್ Vs ನಿರ್ಮಲಾ ದೇವಿ (ಪಟ್ನಾ ಹೈಕೋರ್ಟ್)