-->
ಅನುಕಂಪದ ಉದ್ಯೋಗ: ಸಹೋದರಿಗೆ ನೇಮಕಾತಿ ಅವಕಾಶ ಇದೆಯೇ?- ಹೈಕೋರ್ಟ್ ಆದೇಶ

ಅನುಕಂಪದ ಉದ್ಯೋಗ: ಸಹೋದರಿಗೆ ನೇಮಕಾತಿ ಅವಕಾಶ ಇದೆಯೇ?- ಹೈಕೋರ್ಟ್ ಆದೇಶ

ಅನುಕಂಪದ ಉದ್ಯೋಗ: ಸಹೋದರಿಗೆ ನೇಮಕಾತಿ ಅವಕಾಶ ಇದೆಯೇ?- ಹೈಕೋರ್ಟ್ ಆದೇಶ





ಸರ್ಕಾರಿ ನೌಕರ ಮೃತಪಟ್ಟಲ್ಲಿ ಆತನ ನೌಕರಿಯನ್ನು ಅನುಕಂಪದ ನೆಲೆಯಲ್ಲಿ ಆತನ ಸಹೋದರಿಗೆ ನೀಡಲು ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.


ಮೃತ ನೌಕರನು ಮೃತಪಟ್ಟ ಸಂದರ್ಭದಲ್ಲಿ ಅವರ ಆದಾಯದ ಮೇಲೆ ತಾನು ಅವಲಂಬಿಸಿದ್ದೆ ಎಂಬುದನ್ನು ದೃಢೀಕರಿಸುವ ಯಾವುದೇ ದಾಖಲೆಯನ್ನು ವಿಚಾರಣೆ ವೇಳೆ ಅರ್ಜಿದಾರರು ಒದಗಿಸಿಲ್ಲ. ಅನುಕಂಪದ ಉದ್ಯೋಗವನ್ನು ಸಮರ್ಥಿಸಿಕೊಳ್ಳಲು ಮೃತ ನೌಕರನ ಕುಟುಂಬವು ಆರ್ಥಿಕವಾಗಿ ಮುಗ್ಗಟ್ಟಿನಲ್ಲಿ ಇದೆ ಎಂಬುದನ್ನು ತೋರಿಸುವ ಯಾವುದೇ ದಾಖಲೆಗಳು ಇಲ್ಲವಾಗಿದೆ. ಆದ್ದರಿಂದ ಮೇಲ್ಮನವಿದಾರರನ್ನು ಅನುಕಂಫದ ಆಧಾರದಲ್ಲಿ ಉದ್ಯೋಗಕ್ಕೆ ಪರಿಗಣಿಸಲು ನಿರಾಕರಿಸುವುದೇ ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಪುರಸ್ಕರಿಸಿತು.


ಮೃತ ನೌಕರನ ಕುಟುಂಬ ಸದಸ್ಯರು ಮಾತ್ರ ಅನುಕಂಪದ ಉದ್ಯೋಗ ನೇಮಕಾತಿ ಕೋರಿ ಅರ್ಜಿ ಸಲ್ಲಿಸಲು ಕಾನೂನು ಹೇಳುತ್ತದೆ. ಅದು ಸಹ ಸಾವನ್ನಪ್ಪಿದ ಸರ್ಕಾರಿ ನೌಕರ ಮೇಲೆ ಅವಲಂಬಿತರಾಗಿದ್ದರು ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಮೇಲೆ ಅನುಕಂಪದ ಉದ್ಯೋಗವನ್ನು ಪಡೆಯಲು ಕ್ಲೇಮು ಸಲ್ಲಿಸಬಹುದಾಗಿದೆ ಎಂಬುದನ್ನು ಹೈಕೋರ್ಟ್ ಪುನರುಚ್ಚರಿಸಿತು. 


ಈ ಹಿನ್ನೆಲೆಯಲ್ಲಿ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅದು ಹೇಳಿತು.


Ads on article

Advertise in articles 1

advertising articles 2

Advertise under the article