ಕೃಷಿ ಭೂಮಿಯಲ್ಲಿ ಪೌಲ್ಟ್ರಿ: ತೆರಿಗೆ ವಿಧಿಸಲು ಪಂಚಾಯತ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
ಕೃಷಿ ಭೂಮಿಯಲ್ಲಿ ಪೌಲ್ಟ್ರಿ: ತೆರಿಗೆ ವಿಧಿಸಲು ಪಂಚಾಯತ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
ಕೃಷಿ ಭೂಮಿಯಲ್ಲಿ ಕುಕ್ಕುಟೋದ್ಯಮ ನಡೆಯುತ್ತಿದ್ದರೆ, ಅದಕ್ಕೆ ತೆರಿಗೆ ವಿಧಿಸಲು ಸ್ಥಳೀಯ ಪಂಚಾಯತ್‌ಗೆ ಯಾವುದೇ ಅಧಿಕಾರ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕಂದಾಯ ಇಲಾಖೆಯನ್ನು ಪ್ರತಿನಿಧಿಸಿ ಕರ್ನಾಟಕ ರಾಜ್ಯ ಮತ್ತಿನ್ನೊಬ್ಬರು Vs ಇ. ಭಾಸ್ಕರ್ ರಾವ್ (ILR 2003 KAR 2064) ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಕೃಷಿ ಭೂಮಿಯಲ್ಲಿ ಹೈನುಗಾರಿಕೆ ಯಾ ಕುಕ್ಕುಟ ಪಾಲನೆ ನಡೆಯುತ್ತಿದ್ದರೆ ಅದನ್ನು ವಾಣಿಜ್ಯ ಚಟುವಟಿಕೆ ಎನ್ನಲಾಗದು ಎಂದು ಹೇಳಿದೆ.
ಅದೇ ರೀತಿ, ಕೃಷಿ ಭೂಮಿಯಲ್ಲಿ ಇರುವ ಪೌಲ್ಟ್ರಿ ಫಾರ್ಮ್ ಅಥವಾ ಅದರ ಕಟ್ಟಡವನ್ನು ವಾಣಿಜ್ಯ ಕಟ್ಟಡ ಎಂದು ಕರೆಯಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣ: ಕೆ. ನರಸಿಂಹ ಮೂರ್ತಿ Vs ಸೊಂದೆಕೊಪ್ಪ ಗ್ರಾ. ಪಂ ಮತ್ತಿತರರು
ಕರ್ನಾಟಕ ಹೈಕೋರ್ಟ್ WP 38871/2016 Dated 5-09-2023