ಸುಳ್ಳು ಹೇಳಿ ಮದುವೆ ಮಾಡಿದ್ರು: ವಿಚ್ಚೇದನಕ್ಕೆ ನೆಪವಲ್ಲ- ಹೈಕೋರ್ಟ್ ತೀರ್ಪು
ಸುಳ್ಳು ಹೇಳಿ ಮದುವೆ ಮಾಡಿದ್ರು: ವಿಚ್ಚೇದನಕ್ಕೆ ನೆಪವಲ್ಲ- ಹೈಕೋರ್ಟ್ ತೀರ್ಪು
ಸಾವಿರ ಸುಳ್ಳು ಹೇಳಿ ಮದುವೆ ಮಾಡಿದರು ಎಂಬ ಗಾದೆಯೊಂದಿದೆ. ಆದರೆ, ಹೆಣ್ಣಿಗೆ ಮತ್ತು ಅವರ ಕುಟುಂಬಕ್ಕೆ ಸುಳ್ಳು ಹೇಳಿ ಮದುವೆ ಮಾಡಿದರು ಎಂದು ಹೇಳಿ ಮದುವೆಯನ್ನು ಮುರಿಯಲು ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ತೀರ್ಪು ನೀಡಿದೆ.
ಕುಟುಂಬ ಮತ್ತು ಸಂಪತ್ತಿನ ಕುರಿತು ಮೋಸದ ಮಾತುಗಳನ್ನಾಡಿ ಮದುವೆ ಮಾಡಿಸಿದ್ದಾರೆ ಎಂಬ ಅರೋಪದ ಮೇಲೆ ವಿಚ್ಚೇದನ ಕೋರಿದ ಮಹಿಳೆಯ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಈ ಕಾರಣಕ್ಕೆ ಮದುವೆಯನ್ನು ರದ್ದುಪಡಿಸಲು ಆಗದು ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುರೇಶ್ ಕುಮಾರ್ ಕೈಟ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.
ಸೌಂದರ್ಯವರ್ಧಕ ಉದ್ಯಮದಲ್ಲಿ ತೊಡಗಿಸಿಕೊಂಡಿರುವುದಾಗಿ ಪತಿ ತಮ್ಮನ್ನು ವಂಚಿಸಿದ್ಧಾರೆ. ಆಕೆಯ ಆಸ್ತಿಯಲ್ಲಿ ಒಟ್ಟಾಗಿ ಉದ್ಯಮ ಸ್ಥಾಪಿಸಬಹುದು ಎಂದು ಸುಳ್ಳು ಆಶ್ವಾಸನೆ ನೀಡಿ ವಂಚಿಸಿ ತಮ್ಮನ್ನು ಮದುವೆ ಮಾಡಿದ್ದಾರೆ ಎಂದು ಮಹಿಳೆ ವಿಚ್ಚೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಮದುವೆಗೆ ಆಧಾರವಾಗಿರುವ ವಸ್ತುವಿಷಯಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿಸಿದ್ದರೆ ಮಾತ್ರ ವಿವಾಹ ರದ್ದು ಮಾಡಲು ಅವಕಾಶ ಇರುತ್ತದೆ. ಆದರೆ ಸದ್ರಿ ಪ್ರಕರಣದಲ್ಲಿ ಅರ್ಜಿದಾರರು ಮಾಡಿರುವ ಆರೋಪಗಳು ಮದುವೆ ಸಮಾರಂಭಕ್ಕೆ ಸಂಬಂಧಿಸಿಲ್ಲ, ವೈವಾಹಿಕ ಜೀವನಕ್ಕೂ ಸಂಬಂಧಿಸಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.