-->
ಜಮೀನು ವಿವಾದ: ಲಂಚಕ್ಕೆ ಕೈಚಾಚಿದ ಕೆಎಎಸ್‌ ಅಧಿಕಾರಿ, ಸಹಾಯಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಜಮೀನು ವಿವಾದ: ಲಂಚಕ್ಕೆ ಕೈಚಾಚಿದ ಕೆಎಎಸ್‌ ಅಧಿಕಾರಿ, ಸಹಾಯಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಜಮೀನು ವಿವಾದ: ಲಂಚಕ್ಕೆ ಕೈಚಾಚಿದ ಕೆಎಎಸ್‌ ಅಧಿಕಾರಿ, ಸಹಾಯಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ





ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆದೇಶ ಮಾಡಲು ಲಂಚಕ್ಕೆ ಕೈಚಾಚಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಗಿನ ಉಪ-ವಿಭಾಗಾಧಿಕಾರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರಿನ ವಿಶೇಷ ಲೋಕಾಯುಕ್ತ ನ್ಯಾಯಾಲಯ ತೀರ್ಪು ನೀಡಿದೆ. ಈ ಅಪರಾಧದಲ್ಲಿ ಕೈಜೋಡಿದ್ದ ಸಹ ನೌಕರನಿಗೂ ಶಿಕ್ಷೆ ವಿಧಿಸಲಾಗಿದೆ.



ಕೆಎಎಸ್ ಅಧಿಕಾರಿ ತಬಸ್ಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹ್ಮದ್ ಅವರು ಜೈಲು ಶಿಕ್ಷೆಗೊಳಗಾದ ಅಪರಾಧಿಗಳು.



2017ರ ಮೇ 23ರಂದು ಎಸಿಬಿ ಠಾಣೆಯಲ್ಲಿ ಆಗಿನ ಉಪ ವಿಭಾಗಾಧಿಕಾರಿಯಾಗಿದ್ದ ತಬಸ್ಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗೇಗೌಡ ಈ ತೀರ್ಪು ನೀಡಿದರು.



ಅಪರಾಧ ಎಸಗಿದ್ದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗಳಾದ ಕೆಎಎಸ್ ಅಧಿಕಾರಿ ತಬಸ್ಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹ್ಮದ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತುಮಕೂರು ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.


ಪ್ರಸ್ತುತ ತಬಸ್ಸುಮ್ ಜಹೇರಾ ಕೆಐಎಡಿಬಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೊಬ್ಬ ಅಪರಾಧಿ ಶಬ್ಬೀರ್ ಅಹಮ್ಮದ್ ತುಮಕೂರು ತಾಲೂಕು ಬೆಳ್ಳಾವಿ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.


ಪ್ರಕರಣದ ವಿವರ:

ತಂದೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಮತ್ತೆ ತಮ್ಮ ತಂದೆಯ ಹೆಸರಿಗೆ ದಾಖಲೆ ವರ್ಗಾವಣೆ ಮಾಡಿಕೊಡುವಂತೆ ಕೋರಿ ಕುಣಿಗಲ್ ತಾಲೂಕಿನ ವಿ.ಟಿ. ಜಯರಾಮ್ ಎಂಬವರು ಉಪವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.


ಈ ಬಗ್ಗೆ ಕಚೇರಿ ನೌಕರ ಶಬ್ಬೀರ್ ಅಹಮ್ಮದ್ ಜೊತೆಗೆ ಮಾತುಕತೆ ನಡೆಸುವಂತೆ ತಬಸ್ಸುಮ್ ಜಹೇರಾ ಸೂಚಿಸಿದ್ದರು. ಅದರಂತೆ ಶಬ್ಬೀರ್ ಅವರನ್ನು ಸಂಪರ್ಕಿಸಿದಾಗ ಆತ ರೂ. 35,000/- ಲಂಚ ನೀಡುವಂತೆ ಬೇಡಿಕೆ ಸಲ್ಲಿಸಿದ್ದ. ಅದರಲ್ಲಿ ರೂ. 15,000 ಶಬ್ಬೀರ್ ಇಟ್ಟುಕೊಂಡು ಉಳಿದ 20,000/- ಹಣ ತಬಸುಮ್‌ಗೆ ಜಯರಾಮ್ ಮೂಲಕವೇ ಕೊಡಿಸಿದ್ದರು.


ಹಣ ಕೊಟ್ಟರೂ ಕೆಲಸ ಮಾಡಿ ಕೊಡದಿರುವ ಬಗ್ಗೆ ಕಚೇರಿಗೆ ಬಂದು ವಿಚಾರಿಸಿದರು. ಆದರೆ ಸದ್ರಿ ಲಂಚ ಪಡೆದ ಈ ಅಧಿಕಾರಿಗಳು ಅರ್ಜಿದಾರರನ್ನು ಪದೇ ಪದೇ ಕಚೇರಿ ಅಲೆದಾಟ ನಡೆಸಿದರೂ ಕೆಲಸ ಮಾಡಿಕೊಟ್ಟಿರಲಿಲ್ಲ.


ಈ ಸಮಯದಲ್ಲಿ ಶಬ್ಬೀರ್ ಮತ್ತೆ ರೂ. 25 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಸಮಯದಲ್ಲಿ ತಬಸುಮ್ ಅವರನ್ನು ಭೇಟಿ ಮಾಡಿದಾಗಲೂ ಅವರೂ ಇದೇ ಮಾತನ್ನು ಹೇಳಿದ್ದರು.


ಇಬ್ಬರ ನಡುವಿನ ಮಾತುಕತೆ ಸಂಭಾಷಣೆ, ಮೊಬೈಲ್ ನಡುವಿನ ಮಾತುಕತೆ, ಮತ್ತು ಇತರ ವಿವರಗಳನ್ನು ದಾಖಲಿಸಿಕೊಂಡ ಎಸಿಬಿ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು.


ಇದೀಗ ಇಬ್ಬರಿಗೂ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ರೂ. 20000/- ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.


Ads on article

Advertise in articles 1

advertising articles 2

Advertise under the article