-->
ಮೋಟಾರು ಅಪಘಾತ ಪ್ರಕರಣ: 6 ತಿಂಗಳ ಕಾಲಮಿತಿ ಅನ್ವಯವೇ?- ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಮೋಟಾರು ಅಪಘಾತ ಪ್ರಕರಣ: 6 ತಿಂಗಳ ಕಾಲಮಿತಿ ಅನ್ವಯವೇ?- ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಮೋಟಾರು ಅಪಘಾತ ಪ್ರಕರಣ: 6 ತಿಂಗಳ ಕಾಲಮಿತಿ ಅನ್ವಯವೇ?- ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು





ಮೋಟಾರು ಅಪಘಾತ ಪ್ರಕರಣಗಳನ್ನು ದಾಖಲಿಸಲು ಕಾಲಮಿತಿ ಇದೆಯೇ..? ಮೋಟಾರು ಅಪಘಾತ ಕ್ಲೇಮುಗಳನ್ನು ಕೋರಿ ಅರ್ಜಿ ಸಲ್ಲಿಸಲು ಆರು ತಿಂಗಳ ಕಾಲಮಿತಿ ಇರುವುದು ಯಾವ ಪ್ರಕರಣಗಳಿಗೆ? ಎಂಬ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಮೋಟಾರು ಅಪಘಾತದ ಬಗ್ಗೆ ಪೊಲೀಸರು ಯಾವುದೇ ಪ್ರಥಮ ಮಾಹಿತಿ ವರದಿ(FIR) ದಾಖಲಿಸದಿದ್ದರೆ, ಅಥವಾ ಯಾವುದೇ ವರದಿಯನ್ನು ಕಳುಹಿಸದಿದ್ದರೆ ಅಥವಾ ದಾಖಲಿಸದೇ ಇದ್ದರೆ ಅಂತಹ ಸಂದರ್ಭಗಳಲ್ಲಿ ಮಾತ್ರ ಪ್ರಕರಣ ದಾಖಲಿಸಲು ಆರು ತಿಂಗಳ ಕಾಲಮಿತಿ ಅನ್ವಯವಾಗುತ್ತದೆ ಎಂದು ನ್ಯಾ. ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಮದ್ರಾಸ್ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166 (3) ರ ವ್ಯಾಖ್ಯಾನದಲ್ಲಿ ಕಾನೂನಾತ್ಮಕ ಪ್ರಶ್ನೆ ಬಗ್ಗೆ ಸದ್ರಿ ರಿವಿಷನ್ ಪಿಟಿಷನ್ ಆಲೋಚಿಸುವಂತೆ ಮಾಡಿದೆ. ಸೆಕ್ಷನ್ 166 ರ ಅಡಿಯಲ್ಲಿ ದಾಖಲಿಸಲಾದ ಈ ಅರ್ಜಿಯು ನ್ಯಾಯಾಲಯಕ್ಕೆ ಒಂದು ಜ್ಞಾಪನಾ ಅರ್ಜಿಯಾಗಿದೆ ಎಂದು ಹೇಳಿದೆ.


ಸದ್ರಿ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ, ಮಧ್ಯಂತರ ಅಪಘಾತ ವರದಿ, ಪ್ರಥಮ ಅಪಘಾತ ವರದಿಯಂತಹ ಅಗತ್ಯವಿರುವ ಎಲ್ಲಾ ವಿವರಗಳನ್ನು ಸಲ್ಲಿಸಿದ್ದಾರೆ. ಆದ್ದರಿಂದ, ಸದ್ರಿ ವರದಿಗಳನ್ನು ಕ್ಲೇಮು ಅರ್ಜಿಯಾಗಿ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸುವ ಜ್ಞಾಪನಾ ಅರ್ಜಿಯಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


"ಪೊಲೀಸರು ಅಗತ್ಯ ವರದಿಗಳನ್ನು ಸಲ್ಲಿಸಿದ್ದ ಪ್ರಕರಣಗಳಲ್ಲಿ ಕ್ಲೇಮುದಾರರು ಒಂದು ರೀತಿಯ ಸಂಕೋಲೆಯಿಂದ ಮುಕ್ತವಾಗಿರುತ್ತಾರೆ. ತಮ್ಮ ಕ್ಲೇಮು ಅರ್ಜಿಯನ್ನು ಸಲ್ಲಿಸಲು ಬೇಕಾದ ಅಗತ್ಯವಾದ ದಾಖಲೆಗಳಿಗಾಗಿ ಅವರು ಪರದಾಡಬೇಕಾಗಿಲ್ಲ. ಅಗತ್ಯ ಎಲ್ಲ ದಾಖಲೆಗಳನ್ನು ನೀಡುವ ಮತ್ತು ಪ್ರಕರಣದ ಬಗ್ಗೆ ವರದಿ ಮಾಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.


ಪೊಲೀಸರು ನೀಡಿದ ಮತ್ತು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಮಾಹಿತಿ ನ್ಯಾಯಮಂಡಳಿಯ ಮುಂದಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕ್ಲೇಮುದಾರರು ತಮ್ಮ ಅರ್ಜಿಯು ಕಾಲಮಿತಿಗೆ ಒಳಪಟ್ಟಿದೆಯೇ ಎಂಬ ಭೀತಿಯಿಂದ ಮುಕ್ತವಾಗಬೇಕಿದೆ ಎಂದು ನ್ಯಾಯಪೀಠ ಹೇಳಿದೆ.


ತನಗೆ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು ಮತ್ತು ಕ್ಲೈಮ್ ಅರ್ಜಿಯನ್ನು ಸಮರ್ಪಕವಾಗಿ ಇತ್ಯರ್ಥ ಮಾಡುವುದು, ಸಂತ್ರಸ್ತರಿಗೆ ಸೂಕ್ತ ಸಹಾಯವನ್ನು ನೀಡುವುದು ಕ್ಲೈಮ್ಸ್ ಟ್ರಿಬ್ಯೂನಲ್‌ನ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.


ಪ್ರಕರಣ: Malaravan v. Praveen Travels Private Limited (ಮದ್ರಾಸ್ ಹೈಕೋರ್ಟ್‌) Dated 18.08.2023


Ads on article

Advertise in articles 1

advertising articles 2

Advertise under the article