-->
ಪ್ರೋಸಸ್ ಸಿಬ್ಬಂದಿಗೆ ಸಿ ದರ್ಜೆ: ಹೈಕೋರ್ಟ್‌ನಲ್ಲಿ ನ್ಯಾಯಾಂಗ ಇಲಾಖೆ ನೌಕರರ ಸಂಘದ ಹೋರಾಟ

ಪ್ರೋಸಸ್ ಸಿಬ್ಬಂದಿಗೆ ಸಿ ದರ್ಜೆ: ಹೈಕೋರ್ಟ್‌ನಲ್ಲಿ ನ್ಯಾಯಾಂಗ ಇಲಾಖೆ ನೌಕರರ ಸಂಘದ ಹೋರಾಟ

ಪ್ರೋಸಸ್ ಸಿಬ್ಬಂದಿಗೆ ಸಿ ದರ್ಜೆ: ಹೈಕೋರ್ಟ್‌ನಲ್ಲಿ ನ್ಯಾಯಾಂಗ ಇಲಾಖೆ ನೌಕರರ ಸಂಘದ ಹೋರಾಟ





ಪ್ರೋಸಸ್ ಸಿಬ್ಬಂದಿಗಳಿಗೆ ಸಿ ದರ್ಜೆಯ ಸ್ಥಾನಮಾನಕ್ಕಾಗಿ ಒರಿಸ್ಸಾ ರಾಜ್ಯದ ನ್ಯಾಯಾಂಗ ಇಲಾಖಾ ನೌಕರರ ಸಂಘದಿಂದ ಹೈಕೋರ್ಟ್ ನಲ್ಲಿ ಹೋರಾಟ


ಭಾರತ ದೇಶದ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ನ್ಯಾಯಾಂಗ ಇಲಾಖೆಯ ಪ್ರೋಸೆಸ್ ವಿಭಾಗವು ಪ್ರಮುಖ ಪಾತ್ರ ವಹಿಸುತ್ತದೆ. ಆದೇಶಿಕೆಗಳನ್ನು ಜಾರಿಗೊಳಿಸುವ ಕೆಲಸ ಪ್ರೋಸೆಸ್ ಸರ್ವರ್ (ಆದೇಶಿಕೆ ಜಾರಿಕಾರ) ಗಳದ್ದಾಗಿದ್ದರೆ, ನ್ಯಾಯಾಲಯವು ಹೊರಡಿಸಿದ ಅಧಿಪತ್ರ (ವಾರಂಟ್) ಗಳನ್ನು ಕಾರ್ಯಗತಗೊಳಿಸುವ ಕೆಲಸ ಕೋರ್ಟ್ 'ಬೇಲಿಫ್'ರದ್ದಾಗಿರುತ್ತದೆ. 'ಬೇಲಿಫ್‌'ರು ಕೋರ್ಟ್ ಅಮೀನರೆಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ.

ಪ್ರೊಸೆಸ್ ಸರ್ವರ್ ಮತ್ತು ಬೇಲಿಫ್ ಈ ಶಬ್ದಗಳನ್ನು ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್ ನಲ್ಲಿ ಬಳಸಲಾಗಿದ್ದರೂ ಸಿವಿಲ್ ಪ್ರೊಸೀಜರ್ ಕೋಡ್ ನಲ್ಲಿ ಸಮರ್ಪಕ ಅಧಿಕಾರಿ (Proper Officer) ಎಂಬ ಶಬ್ದ ಬಳಸಲಾಗಿದೆ.


ಪ್ರೋಸೆಸ್ ವಿಭಾಗದ ಹುದ್ದೆಗಳು ರಾಷ್ಟ್ರ ವ್ಯಾಪಿ ಏಕರೂಪವಾಗಿಲ್ಲ.

ನೇಮಕಾತಿ, ವಿದ್ಯಾರ್ಹತೆ, ಭಡ್ತಿ ಮುಂತಾದ ವಿಷಯಗಳಲ್ಲಿ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ನಿಯಮಗಳಿವೆ. ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ, ನೇತೃತ್ವದ ಪ್ರಥಮ ರಾಷ್ಟ್ರೀಯ ನ್ಯಾಯಕ ವೇತನ ವಿಭಾಗದ ನೌಕರರ ಸೇವಾ ಸ್ಥಿತಿಗತಿ ಮತ್ತು ಸುಧಾರಣೆ ಕುರಿತು ತನ್ನ ವರದಿಯ ಅಧ್ಯಾಯ VII ರಲ್ಲಿ ಸವಿಸ್ತಾರವಾಗಿ ಚರ್ಚಿಸಿದೆ.


FNJPC ಯು ನ್ಯಾಯಾಂಗ ಅಧಿಕಾರಿಗಳಿಗೆ ನೀಡಿದಂತೆ ವಿವಿಧ ರಾಜ್ಯಗಳ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ನೌಕರರಿಗೆ ರಾಷ್ಟ್ರ ವ್ಯಾಪಿ ಏಕರೂಪದ ವೇತನ ಹಾಗೂ ಸೇವಾ ಸ್ಥಿತಿಗತಿಗಳನ್ನು ಶಿಫಾರಸು ಮಾಡಿಲ್ಲ. ಬದಲಿಗೆ ನ್ಯಾಯಾಂಗ ನೌಕರರು ಆಯಾ ರಾಜ್ಯದ ವೇತನಕ್ಕೆ ಹಾಗೂ ಸೇವಾ ಸ್ಥಿತಿಗತಿಗಳಿಗೆ ಅರ್ಹರಾಗಿರುತ್ತಾರೆ ಹಾಗೂ ನ್ಯಾಯಾಂಗ ನೌಕರರ ಸೇವಾ ಸ್ಥಿತಿಗತಿ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುವುದರಿಂದ ರಾಷ್ಟ್ರ ವ್ಯಾಪಿ ಏಕರೂಪದ ವೇತನ ಶ್ರೇಣಿ ಅಥವಾ ಸೇವಾ ಸ್ಥಿತಿಗತಿಗಳ ಕುರಿತು ನಿಯಮ ರೂಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ತನ್ನ ವರದಿಯಲ್ಲಿ ವ್ಯಕ್ತಪಡಿಸಿದೆ.


ನ್ಯಾಯಾಂಗ ನೌಕರರಿಗೆ ಏಕರೂಪದ ವೇತನ ವ್ಯವಸ್ಥೆ ಜಾರಿ ಆಗಬೇಕೆಂಬ ಬೇಡಿಕೆಯೊಂದಿಗೆ ಅಖಿಲ ಭಾರತ ನ್ಯಾಯಾಂಗ ಇಲಾಖಾ ನೌಕರರ ಒಕ್ಕೂಟವು ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಿದ ರಿಟ್ ಪಿಟಿಷನ್ 1047/2017 ವಿಚಾರಣೆಯಲ್ಲಿ ಬಾಕಿ ಇದೆ.


ಪ್ರೋಸೆಸ್ ಸರ್ವರ್ ಮತ್ತು ಬೇಲಿಫ್ ಹುದ್ದೆಗಳು 'ಸಿ' ದರ್ಜೆ ಹುದ್ದೆಗಳೋ ಅಥವಾ 'ಡಿ' ದರ್ಜೆಯ ಹುದ್ದೆಗಳೋ ಎಂಬ ಬಗ್ಗೆ ಗೊಂದಲಮಯ ಸನ್ನಿವೇಶ ನಿರ್ಮಾಣವಾಗಿದೆ. ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕ, ತಮಿಳುನಾಡು ಮತ್ತು ಪಂಜಾಬ್ ನಲ್ಲಿ ಪ್ರೊಸೆಸ್ ವಿಭಾಗದ ಹುದ್ದೆಗಳನ್ನು 'ಸಿ' ದರ್ಜೆ ಹುದ್ದೆಗಳೆಂದು ಘೋಷಿಸಲಾಗಿದೆ. ಉಳಿದ ರಾಜ್ಯಗಳಲ್ಲಿ ಸದರಿ ಹುದ್ದೆಗಳು ಡಿ ದರ್ಜೆಯ ಹುದ್ದೆಗಳಾಗಿವೆ. ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗದ ವರದಿಯಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ


In Karnataka also the process server is in group C but it is only for mental satisfaction. The post is not given pay scale of group C . It carries the pay scale of 2600 to 4350 admissible to group D employees.


ನಮ್ಮ ರಾಜ್ಯದಲ್ಲಿ ಪ್ರೊಸೆಸ್ ಸರ್ವರ್ ಹುದ್ದೆಯನ್ನು 'ಸಿ' ದರ್ಜೆ ಹುದ್ದೆ ಎಂದು ವರ್ಗೀಕರಿಸಲಾಗಿದೆ. ಆದರೆ ಈ ವರ್ಗೀಕರಣ ಕೇವಲ ಮಾನಸಿಕ ನೆಮ್ಮದಿಗಾಗಿ ಮಾತ್ರ. 'ಡಿ' ಗ್ರೂಪ್ ನೌಕರರಿಗೆ ನಿಗದಿಪಡಿಸಿದ ವೇತನ ಶ್ರೇಣಿಯನ್ನು ನೀಡಲಾಗಿದೆ.


ಪ್ರೋಸೆಸ್ ಸರ್ವರ್ ಹುದ್ದೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಥಿ ಐದನೇ ತರಗತಿಯಿಂದ ಪ್ರಾರಂಭವಾಗಿ ಎಸ್‌ಎಸ್‌ಎಲ್‌ಸಿ ವರೆಗೆ ಇದೆ. ಸಿ ದರ್ಜೆ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಮತ್ತು ಕನಿಷ್ಠ ವೇತನ ಶ್ರೇಣಿಯನ್ನು ಪ್ರೋಸೆಸ್ ಸರ್ವರ್ ಹುದ್ದೆಗೆ ಅನ್ವಯಿಸಿದ್ದಲ್ಲಿ ಮಾತ್ರ ಸದರಿ ಹುದ್ದೆಯನ್ನು ಸಿ ದರ್ಜೆ ಹುದ್ದೆ ಎಂದು ವರ್ಗೀಕರಿಸಲು ಸಾಧ್ಯ.


ಬೇಲಿಫ್ ಹುದ್ದೆಗಳು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸಮಾನವಾದ ವೇತನ ಶ್ರೇಣಿಯನ್ನು ಹೊಂದಿರುವುದರಿಂದ ಸಿ ದರ್ಜೆ ಹುದ್ದೆ ಎಂದು ವರ್ಗೀಕರಿಸಲು ಅರ್ಹತೆ ಪಡೆದಿವೆ. ಆದರೆ ಸಿ ದರ್ಜೆ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಇಲ್ಲದೆ ಇರುವುದು ಗೊಂದಲಮಯ ಸನ್ನಿವೇಶಕ್ಕೆ ಕಾರಣವಾಗಿದೆ. ಬಹುತೇಕ ರಾಜ್ಯಗಳಲ್ಲಿ ಪ್ರೋಸೆಸ್ ಸರ್ವರ್ ಮತ್ತು ಬೇಲೀಫ್ ಎಂಬ ಎರಡು ಪದವೃಂದಗಳಿವೆ. ಇನ್ನು ನೇಮಕಾತಿ ನಿಯಮಗಳು ಕೂಡ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ. ಕೆಲವು ರಾಜ್ಯಗಳಲ್ಲಿ ಬೇಲಿಫ್ ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬಲಾಗುತ್ತದೆ. ನಮ್ಮ ರಾಜ್ಯದಲ್ಲಿ ಭಡ್ತಿ ಮೂಲಕ ಭರ್ತಿ ಮಾಡಲಾಗುತ್ತದೆ.


ಭಡ್ತಿಯ ಅವಕಾಶ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ. ನಮ್ಮ ರಾಜ್ಯದಲ್ಲಿ ಪ್ರೊಸೆಸ್ ಸರ್ವರ್ ಹುದ್ದೆಯಿಂದ ಬೇಲೀಫ್ ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಭಡ್ತಿ ಪಡೆಯುವ ಅವಕಾಶವಿದೆ.


ಒರಿಸ್ಸಾ ರಾಜ್ಯದ ಪ್ರೋಸೆಸ್ ಸಿಬ್ಬಂದಿಗಳು ಸಿ ದರ್ಜೆಯ ವೇತನವನ್ನು ಪಡೆಯುತ್ತಿದ್ದರೂ ಡಿ ದರ್ಜೆಯ ನೌಕರರೆಂದು ವರ್ಗೀಕರಣ ಹೊಂದಿರುತ್ತಾರೆ. ಆದುದರಿಂದ ಪ್ರೊಸೆಸ್ ಸಿಬಂದಿಗಳನ್ನು ಸಿ ದರ್ಜೆ ನೌಕರರೆಂದು ವರ್ಗೀಕರಿಸಬೇಕೆಂದು ಕೋರಿ ಒರಿಸ್ಸಾ ರಾಜ್ಯ ನ್ಯಾಯಾಂಗ ನೌಕರರ ಸಂಘವು ಒರಿಸ್ಸಾ ಹೈಕೋರ್ಟ್ ನಲ್ಲಿ W P.(C)5682/2019 ಅನ್ನು ದಾಖಲಿಸಿದ್ದು ವಿಚಾರಣೆಯಲ್ಲಿ ಬಾಕಿ ಇದೆ.


ನಮ್ಮ ಕರ್ನಾಟಕದ ರಾಜ್ಯದ ಪರಿಸ್ಥಿತಿ ಇದಕ್ಕೆ ತದ್ವಿರುದ್ದವಾಗಿದೆ. ಇಲ್ಲಿ ಪ್ರೋಸೆಸ್ ಸಿಬ್ಬಂದಿಗಳನ್ನು ಸಿ ದರ್ಜೆಯಡಿ ವರ್ಗೀಕರಿಸಲಾಗಿದೆ. ಆದರೆ ವೇತನ ಶ್ರೇಣಿ ಮಾತ್ರ ಡಿ ದರ್ಜೆಯ ನೌಕರರದ್ದಾಗಿದೆ. ಈ ತಾರತಮ್ಯ ನಿವಾರಣೆಗೆ ಸಂಬಂಧಪಟ್ಟ ಪ್ರೋಸೆಸ್ ಸರ್ವರ್ ಮತ್ತು ಬೇಲಿಫ್ ನೌಕರರ ಸಂಘವು ರಾಜ್ಯ ಸಂಘದೊಂದಿಗೆ ಸೇರಿ 7ನೇ ವೇತನ ಆಯೋಗದ ಸಮಕ್ಷಮ ಸಮರ್ಥವಾದ ಮಂಡಿಸಿ ತನ್ನ ಬೇಡಿಕೆಗಳನ್ನು ಈಡೇರಿಸುವ ಉಜ್ವಲ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವರೆಂದು ಆಶಿಸೋಣವೇ?


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


Photo: Sri Prakash Nayak

Ads on article

Advertise in articles 1

advertising articles 2

Advertise under the article