ಆಸ್ತಿ ಪರಿಷ್ಕೃತ ಮಾರ್ಗಸೂಚಿ ದರ ಅಪ್ಡೇಟ್: ನೋಂದಣಿ ಮುದ್ರಾಂಕ ಪೋರ್ಟಲ್ 17 ಗಂಟೆ ಸ್ಥಗಿತ
ಆಸ್ತಿ ಪರಿಷ್ಕೃತ ಮಾರ್ಗಸೂಚಿ ದರ ಅಪ್ಡೇಟ್: ನೋಂದಣಿ ಮುದ್ರಾಂಕ ಪೋರ್ಟಲ್ 17 ಗಂಟೆ ಸ್ಥಗಿತ
ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ದರದಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಥಗಿತಗೊಳ್ಳಲಿದೆ.
ಹೊಸದಾಗಿ ಸಿದ್ದಪಡಿಸಿರುವ ಮಾನದಂಡಗಳ ಆಧಾರದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪೋರ್ಟಲ್‌ನ್ನು ಅಪ್‌ಡೇಟ್ ಮಾಡುವ ಕಾರ್ಯಕ್ಕೆ ರಾತ್ರಿ 12 ಗಂಟೆಯಿಂದ ಮಾಡಲಾಗುವುದು. ಇದಕ್ಕಾಗಿ ಪೋರ್ಟಲ್‌ನ್ನು 17 ಗಂಟೆಗಳ ಕಾಲ ಸಾರ್ವಜನಿಕ ಸೇವೆಗೆ ಸ್ಥಗಿತಗೊಳಸಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 30ರ ಮಧ್ಯಾಹ್ನ 12 ಗಂಟೆಯಿಂದ ಅಕ್ಟೋಬರ್ 1 ಬೆಳಿಗ್ಗೆ 5 ಗಂಟೆಯ ವರೆಗೆ ಸ್ಥಗಿತಗೊಳ್ಳಲಿದೆ. ಅಕ್ಟೋಬರ್ 1 ಬೆಳಿಗ್ಗೆ 5 ಗಂಟೆಯಿಂದ ಸಾರ್ವಜನಿಕರು ಮತ್ತೆ ಇಲಾಖೆಯ ಪೋರ್ಟಲ್‌ನ್ನು ಬಳಸಬಹುದಾಗಿದೆ.
ಈಗಾಗಲೇ ಉಪ ನೋಂದಣಾಧಿಕಾರಿ ಪರಿಶೀಲನೆ ಮಾಡಿದ ಎಲ್ಲ ಅರ್ಜಿಗಳ ಪಾವತಿಯನ್ನೂ ಗ್ರಾಹಕರು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ಮರು ಮೌಲ್ಯಮಾಪನಕ್ಕಾಗಿ ಉಪ ನೋಂದಣಾಧಿಕಾರಿಗೆ ಹಿಂದಿರುಗಿಸಲಾಗುತ್ತದೆ.
ಹಳೇ ದರ ಪಾವತಿಸಿದವರು, ಹೊಸ ದರದ ವ್ಯತ್ಯಾಸದ ಮೊತ್ತವನ್ನು ಮತ್ತೊಮ್ಮೆ ಭರಿಸಬೇಕು.
ಸೆಪ್ಟೆಂಬರ್ 30ರ ನಂತರ ನೋಂದಾಯಿಸುವ ಯಾವುದೇ ದಸ್ತಾವೇಜುಗಳಿಗೆ ಹೊಸ ಮಾರ್ಗಸೂಚಿ ದರ ಅನ್ವಯವಾಗುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕಿ ಮತ್ತು ಮುದ್ರಾಂಕಗಳ ಆಯುಕ್ತರಾ ಬಿ.ಆರ್. ಮಮತಾ ಹೇಳಿದ್ದಾರೆ.