ಅದಾಲತ್ ಅವಾರ್ಡ್: ಪಕ್ಷಕಾರರ ಸಹಿ ಇಲ್ಲದಿದ್ದರೆ ಅಮಲ್ಜಾರಿಗೆ ಯೋಗ್ಯವಲ್ಲ- ಹೈಕೋರ್ಟ್
Sunday, October 29, 2023
ಅದಾಲತ್ ಅವಾರ್ಡ್: ಪಕ್ಷಕಾರರ ಸಹಿ ಇಲ್ಲದಿದ್ದರೆ ಅಮಲ್ಜಾರಿಗೆ ಯೋಗ್ಯವಲ್ಲ- ಹೈಕೋರ್ಟ್
ಪಕ್ಷಕಾರರ ಸಮ್ಮತಿ ಬಳಿಕ ಲೋಕ ಅದಾಲತ್‌ನಲ್ಲಿ ಹೊರಡಿಸಲಾಗುವ ಅವಾರ್ಡ್‌ಗೆ ಪಕ್ಷಕಾರರ ಸಹಿ ಇಲ್ಲದಿದ್ದರೆ ಅದು ಅಮಲ್ಜಾರಿ (Execution)ಗೆ ಯೋಗ್ಯವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಕೆ.ಆರ್. ಜಯಪ್ರಕಾಶ್ Vs ಕೇರಳ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಜು ಅಬ್ರಹಾಂ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಅದಾಲತ್ ಅವಾರ್ಡ್‌ಗೆ ಪಕ್ಷಕಾರರ ಸಹಿ ಅತಿ ಮುಖ್ಯವಾಗಿದೆ. ಆ ಬಳಿಕ ಅವರನ್ನು ವಕೀಲರು ಪ್ರತಿನಿಧಿಸಿದ್ದರೆ ಅವರ ಸಹಿಯೂ ಅಗತ್ಯವಾಗಿದೆ. ಆದರೆ, ಪಕ್ಷಕಾರರ ಸಹಿಯ ಅನುಪಸ್ಥಿತಿಯಲ್ಲಿ ಅವರನ್ನು ಪ್ರತಿನಿಧಿಸುವ ವಕೀಲರ ಸಹಿ ಇದೆ ಎಂದ ಮಾತ್ರಕ್ಕೆ ಆ ಅವಾರ್ಡ್ ಸಿಂಧುವಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಕೆ.ಆರ್. ಜಯಪ್ರಕಾಶ್ Vs ಕೇರಳ (ಕೇರಳ ಹೈಕೋರ್ಟ್)