![ಕಾಲಮಿತಿಯಲ್ಲಿ ವ್ಯಾಜ್ಯಗಳ ನಿರ್ವಹಣೆ: ರಾಜ್ಯ ಸರ್ಕಾರ ಮಹತ್ವದ ಆದೇಶ ಕಾಲಮಿತಿಯಲ್ಲಿ ವ್ಯಾಜ್ಯಗಳ ನಿರ್ವಹಣೆ: ರಾಜ್ಯ ಸರ್ಕಾರ ಮಹತ್ವದ ಆದೇಶ](https://blogger.googleusercontent.com/img/b/R29vZ2xl/AVvXsEhONaShS6sutDCX4_So1hdycY_bzbjwhB29bBzLdgNLlN1sFHiyghPAHu7QvweOCBYJ7XkeXC-pDaxwJezrWHYIwJUvr5mwMH-0s1lRpgUtbSmED0oUzKjvF-yYjPM29oJ1FAXMiSylEYdp7vDQPC2Uzbgc1RKSIqnN-_jpBtCHgxri5Fz5c3Rks2DHGk4o/w640-h552/Seal_of_Karnataka.png)
ಕಾಲಮಿತಿಯಲ್ಲಿ ವ್ಯಾಜ್ಯಗಳ ನಿರ್ವಹಣೆ: ರಾಜ್ಯ ಸರ್ಕಾರ ಮಹತ್ವದ ಆದೇಶ
ಕಾಲಮಿತಿಯಲ್ಲಿ ವ್ಯಾಜ್ಯಗಳ ನಿರ್ವಹಣೆ: ರಾಜ್ಯ ಸರ್ಕಾರ ಮಹತ್ವದ ಆದೇಶ
ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತಕ್ಷಣ ಸರ್ಕಾರದ ಪರವಾಗಿ ನ್ಯಾಯವಾದಿಯನ್ನು ನಿಯೋಜಿಸುವ ಸರ್ಕಾರದ ಆದೇಶ, ವಕಾಲತ್‌ನಾಮ ಸಿದ್ದಪಡಿಸುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯಾ ಇಲಾಖಾ ಮುಖ್ಯಸ್ಥರಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
9-10-2023ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಈ ಸುತ್ತೋಲೆ ಹೊರಡಿಸಿದ್ದು, ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು, ಎಲ್ಲ ಕ್ಷೇತ್ರಗಳ ಇಲಾಖೆಗಳ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳಿಗೆ ಈ ಸುತ್ತೋಲೆಯನ್ನು ಕಳಿಸಿಕೊಡಲಾಗಿದೆ.
ರಾಜ್ಯದ ಹೈಕೋರ್ಟ್, ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕೇಂದ್ರ ಆಡಳಿತ ನ್ಯಾಯಮಂಡಳಿ, ಹಾಗೂ ಇತರ ನ್ಯಾಯ ಪ್ರಾಧಿಕಾರ, ನ್ಯಾಯಮಂಡಳಿಗಳಲ್ಲಿ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಾಗುವ ಮಾಹಿತಿ ಲಭ್ಯವಾದ ಕೂಡಲೇ ಸಂಬಂಧಿತ ಇಲಾಖಾ ಮುಖ್ಯಸ್ಥರು ಕಾನೂನು ಕೋಶದ ಮುಖ್ಯಸ್ಥರಿಗೆ ಮಾಹಿತಿ ಹಾಗೂ ಕಡತ ಕಳಿಸಿಕೊಡಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.