ಸಿವಿಲ್ ಜಡ್ಜ್ ಆಯ್ಕೆ ಪರೀಕ್ಷೆ: ವಕೀಲರಿಗೆ ಉಚಿತ ಆನ್‌ಲೈನ್ ಉಪನ್ಯಾಸ ಸರಣಿ ಆರಂಭ
ಸಿವಿಲ್ ಜಡ್ಜ್ ಆಯ್ಕೆ ಪರೀಕ್ಷೆ: ವಕೀಲರಿಗೆ ಉಚಿತ ಆನ್‌ಲೈನ್ ಉಪನ್ಯಾಸ ಸರಣಿ ಆರಂಭ
ಕರ್ನಾಟಕ ಹೈಕೋರ್ಟ್ ನಡೆಸುವ ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಪ್ರಾಥಮಿಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಮತ್ತು ವಕೀಲರಿಗೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್(AILU) ಉಚಿತ ಆನ್‌ಲೈನ್ ಕ್ಲಾಸ್ ಆರಂಭಿಸಿದೆ.
ಶನಿವಾರದಿಂದ ಆನ್‌ಲೈನ್ ಕ್ಲಾಸ್‌ಗಳು ನಡೆಯಲಿದ್ದು, ಈ ತರಗತಿ ಜೂಮ್ ಆಪ್ ವೇದಿಕೆಯಲ್ಲಿ ನಡೆಯಲಿದೆ.
Meeting ID: 534 262 2035
Passcode: AILUCLASS
ಆನ್‌ಲೈನ್ ಕ್ಲಾಸ್ ಸಂಜೆ 6-00 ಗಂಟೆಗೆ ಆರಂಭವಾಗಲಿದ್ದು, ಕರ್ನಾಟಕ ಹೈಕೋರ್ಟ್‌ನ ವಕೀಲರಾದ ಶ್ರೀ ಜಗದೀಶ್ ಮುಂಡರಗಿ ಅವರು 'An Overview of CPC' ಎಂಬ ವಿಷಯದ ಬಗ್ಗೆ ಆರಂಭಿಕ ಉಪನ್ಯಾಸ ನೀಡಲಿದ್ದಾರೆ.
ಆನ್‌ಲೈನ್ ಉಪನ್ಯಾಸ ಸರಣಿಯ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯ ಹಾಗೂ AILU ಉಪಾಧ್ಯಕ್ಷರಾದ ಶ್ರೀ ಕೋಟೇಶ್ವರ ರಾವ್ ಅವರು ನೆರವೇರಿಸಲಿದ್ದಾರೆ.
ಉಪನ್ಯಾಸ ಸರಣಿಯ ಕುರಿತು ಹೆಚ್ಚಿನ ಮಾಹಿತಿಗೆ ಈ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.
ಮೊಬೈಲ್ ನಂಬರ್: 9449621171