ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ: ಕೇಂದ್ರಕ್ಕೆ 18 ಹೆಸರು ಶಿಫಾರಸ್ಸು ಮಾಡಿದ ಕೊಲೀಜಿಯಂ
ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ: ಕೇಂದ್ರಕ್ಕೆ 18 ಹೆಸರು ಶಿಫಾರಸ್ಸು ಮಾಡಿದ ಕೊಲೀಜಿಯಂ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಧನಂಜಯ ವೈ ಚಂದ್ರಚೂಡ್ ನೇತೃತ್ವದ ಕೊಲೀಜಿಯಂ ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸಲು 18 ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ಪೈಕಿ 13 ಮಂದಿ ನ್ಯಾಯಾಂಗ ಅಧಿಕಾರಿಗಳು ಮತ್ತು 5 ಮಂದಿ ಅಡ್ವಕೇಟ್‌ಗಳಾಗಿದ್ದಾರೆ.
ನ್ಯಾಯಾಂಗ ಅಧಿಕಾರಿಗಳಾದ ಶಾಲಿಂದರ್ ಕೌರ್ ಹಾಗೂ ರವೀಂದ್ರ ಡುಡೇಜಾ ಅವರನ್ನು ದೆಹಲಿ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ. ಈ ಇಬ್ಬರು ಅಧಿಕಾರಿಗಳಿಗಿಂದ ಹಿರಿಯ ಅಧಿಕಾರಿಯೊಬ್ಬರ ಪದೋನ್ನತಿಗೆ ಕೊಲೀಜಿಯಂ ಒಪ್ಪಿಗೆ ನೀಡಿಲ್ಲ.
ಇದೇ ವೇಳೆ, ಕೇಂದ್ರ ಸರ್ಕಾರದ ಆಕ್ಷೇಪದ ಹೊರತಾಗಿಯೂ ಅಡ್ವಕೇಟ್ ರವೀಂದ್ರ ಕುಮಾರ್ ಅಗ್ರವಾಲ್ ಅವರನ್ನು ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಕೇರಳ, ಗುಜರಾತ್, ತ್ರಿಪುರಾ ಮತ್ತು ಆಂಧ್ರಪ್ರದೇಶದ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.