-->
COP: ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್- ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೇ ದಿನ

COP: ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್- ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೇ ದಿನ

COP: ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್- ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೇ ದಿನ !





ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತನ್ನ ಸದಸ್ಯ ವಕೀಲರಿಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ (COP)ಗೆ ಅರ್ಜಿ ಸಲ್ಲಿಸಲು ನವೆಂಬರ್ 25ರಂದು ಕೊನೆ ದಿನವಾಗಿತ್ತು. ಈ ಹಿಂದೆ ಒಮ್ಮೆ ನಿಗದಿಗೊಳಿಸಲಾಗಿದ್ದ ಗಡುವನ್ನು ನವೆಂಬರ್ 25ರ ವರೆಗೆ ವಿಸ್ತರಿಸಲಾಗಿತ್ತು.


ಈ ಹಿಂದೆ, ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ ಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿತ್ತು. ನವೆಂಬರ್ 25 ತಾರೀಕಿನ ವರೆಗೆ COPಗೆ ವಕೀಲರು ಅರ್ಜಿ ಸಲ್ಲಿಸಲು ವಕೀಲರ ಪರಿಷತ್ತು ಅವಕಾಶ ಕಲ್ಪಿಸಿದೆ.

 

ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳ ವಕೀಲರ ಸಂಘಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಗಡುವನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು 26-10-2023ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.


ಆದರೆ, ನವೆಂಬರ್ 25ನ್ನು ಅಂತಿಮ ಗಡುವು ಎಂದೇ ಪರಿಗಣಿಸಬೇಕು. ಆ ನಂತರ ಇನ್ನೊಂದು ಗಡುವನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ವಕೀಲರ ಪರಿಷತ್ತು ಹೇಳಿದ್ದು, ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ ಬಯಸಿ ಅರ್ಜಿ ಸಲ್ಲಿಸುವವರು ಈ ಗಡುವು ವಿಸ್ತರಣೆಯ ಅನುಕೂಲವನ್ನು ಪಡೆದುಕೊಳ್ಳುವಂತೆ ತನ್ನ ಸದಸ್ಯ ವಕೀಲರಲ್ಲಿ ಮನವಿ ಮಾಡಿದೆ.


Non Practicing Advocates ಪಟ್ಟಿಯಲ್ಲಿ ಇರುವ ವಕೀಲರ ಸದಸ್ಯರು ದಂಡ ಹಾಗೂ ಶುಲ್ಕದೊಂದಿಗೆ ನಿಗದಿತ ಗಡುವಿನೊಳಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ ಕೋರಿ ಅರ್ಜಿ ಸಲ್ಲಿಸಬೇಕು. 


ಅರ್ಜಿ ಸಲ್ಲಿಸದ ವಕೀಲರನ್ನು Non Practicing Advocates ಪಟ್ಟಿಯಲ್ಲೇ ಮುಂದುವರಿಸಲಾಗುವುದು ಎಂದು ವಕೀಲರ ಪರಿಷತ್ತು ಹೇಳಿದೆ.


Website: ksbc.org.in

Deadline to submit the applcation for COP: 25-11-2023


Ads on article

Advertise in articles 1

advertising articles 2

Advertise under the article