ಭ್ರಷ್ಟಾಚಾರ, ಅಕ್ರಮ ಕಾಮಗಾರಿ ನಡೆದಿದ್ದರೆ ದಾಖಲೆ/ ಮಾಹಿತಿ ನೀಡಿ: ನ್ಯಾ. ಎಚ್.ಎನ್.ದಾಸ್ ಆಯೋಗದ ಸೂಚನೆ
ಭ್ರಷ್ಟಾಚಾರ,
ಅಕ್ರಮ ಕಾಮಗಾರಿ ನಡೆದಿದ್ದರೆ ದಾಖಲೆ/ ಮಾಹಿತಿ ನೀಡಿ: ನ್ಯಾ. ಎಚ್.ಎನ್.ದಾಸ್ ಆಯೋಗದ ಸೂಚನೆ
26-07-2019ರಿಂದ
31-03-2023ರ ಅವಧಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ನಡೆದಿರುವ ಕಾಮಗಾರಿ ಹಾಗೂ ಅದಕ್ಕೆ
ಸಂಬಂಧಿಸಿದ ಹಣ ಬಿಡುಗಡೆಯಲ್ಲಿ ಭ್ರಷ್ಟಾಚಾರ ಅಥವಾ ಅಕ್ರಮ ನಡೆದಿದ್ದರೆ ದೂರು ನೀಡುವಂತೆ ಜಸ್ಟಿಸ್
ಎಚ್. ಎನ್. ನಾಗಮೋಹನದಾಸ್ ತನಿಖಾ ಆಯೋಗ ಮನವಿ ಮಾಡಿದೆ.
ಲೋಕೋಪಯೋಗಿ
ಇಲಾಖೆ (PWD), ಜಲ ಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಪಂಚಾಯತ್
ರಾಜ್ ಇಲಾಖೆ ಮತ್ತು ಕಿರು ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಈ ನಾಲ್ಕು ವರ್ಷ ಅವಧಿಯಲ್ಲಿ
ನಡೆದಿರುವ ಕಾಮಗಾರಿ, ಬಿಲ್ ಪಾವತಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ
ನಡೆದಿದ್ದರೆ ಲಿಖಿತವಾಗಿ ಯಾ ದಾಖಲೆ ಸಹಿತ ಆಯೋಗಕ್ಕೆ ಮಾಹಿತಿ ನೀಡಬಹುದು ಎಂದು ತನಿಖಾ ಆಯೋಗದ 6-10-2023ರ
ಅಧಿಸೂಚನೆಯಲ್ಲಿ ಕೋರಲಾಗಿದೆ.
ಅಥವಾ
ಸಂಘಗಳ ಕಾಮಗಾರಿಗಳಿಗೆ ಸರಕಾರದಿಂದ ಹಣ ಬಿಡುಗಡೆ ಆಗಿದ್ದರೆ ಆ ಬಗ್ಗೆಯೂ ಆಸಕ್ತರು ಜ!! ಹೆಚ್ ಎನ್ ನಾಗಮೋಹನದಾಸ್ ವಿಚಾರಣಾ ಆಯೋಗಕ್ಕೆ ದೂರು ಸಲ್ಲಿಸಬಹುದು.
ಮಾಹಿತಿಯನ್ನು
ಅಥವಾ ದಾಖಲೆಯನ್ನು ವೈಯಕ್ತಿಕವಾಗಿಯೂ ನೀಡಬಹುದು. ಇಲ್ಲವೇ ಇಮೇಲ್ ಯಾ ಅಂಚೆ ಮೂಲಕ ಕಳುಹಿಸಿಕೊಡಬಹುದು.
ಇ ಮೇಲ್ ವಿಳಾಸ- justicenmdasinquirycommission@
ಅಂಚೆ ವಿಳಾಸ: 3rd
floor, PWD main building, KR Circle, Bangalore-560 001
*ಕೊನೆಯ ದಿನಾಂಕ 10.11.2023*