ಸೈಬರ್ ಅಪರಾಧ ತಡೆಗೆ ಸಮರ್ಪಕ ಕಾನೂನು ಜಾರಿ: ಹೊಸ ನಿಯಮ ರೂಪಿಸಲು ತಂತ್ರಜ್ಞರ ತಂಡ
Sunday, October 29, 2023
ಸೈಬರ್ ಅಪರಾಧ ತಡೆಗೆ ಸಮರ್ಪಕ ಕಾನೂನು ಜಾರಿ: ಹೊಸ ನಿಯಮ ರೂಪಿಸಲು ತಂತ್ರಜ್ಞರ ತಂಡ
ಸೈಬರ್ ಲೋಕದಲ್ಲಿ ನಡೆಯುತ್ತಿರುವ ಆರ್ಥಿಕ ಅಪರಾಧಗಳು ಇತ್ತೀಚೆಗೆ ಎಲ್ಲೆ ಮೀರಿದೆ. ಪಾತಕಿಗಳು ಯಾಮಾರಿಸಿ ನಾಗರಿಕರ ಮೊಬೈಲ್‌ಗೆ ನುಸುಳಿ, ಬ್ಯಾಂಕ್ ಖಾತೆಗೆ ಕನ್ನ ಹಾಕುವುದು ಸರ್ವೇ ಸಾಮಾನ್ಯವಾಗಿದೆ.
ಇದಕ್ಕೆ ಬ್ರೇಕ್ ಹಾಕಲು ಸೈಬರ್ ಅಪರಾಧ ತಡೆಗೆ ಸಮರ್ಪಕ ಕಾನೂನು ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೊಸ ನಿಯಮಗಳನ್ನು ರೂಪಿಸಲು ತಂತ್ರಜ್ಞರ ತಂಡವೊಂದು ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ವೈಟ್ ಕಾಲರ್ ಅಪರಾಧಗಳು ಹೆಚ್ಚುತ್ತಿರುವುದು ಪೊಲೀಸ್ ಇಲಾಖೆಯನ್ನೂ ಆತಂಕಕ್ಕೀಡು ಮಾಡಿದೆ.
ಪೊಲೀಸ್ ಇಲಾಖೆಯಲ್ಲಿ ಕಂಪ್ಯೂಟರ್ ಶಿಕ್ಷಣ, ಸೈಬರ್ ಅಪರಾಧ ತಡೆಗೆ ತರಬೇತಿ ಮತ್ತು ಶಸ್ತ್ರಾಸ್ತ್ರ ಬಳಕೆಯಲ್ಲಿ ಸಮರ್ಪಕತೆ ಮೂಡಿಸುವ ಮೂಲಕ ಇಲಾಖೆಯನ್ನು ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.