ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆಯಲ್ಲಿ ಭಾರೀ ಏರಿಕೆ!
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆಯಲ್ಲಿ ಭಾರೀ ಏರಿಕೆ!
ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ದೊರೆತಿದೆ. ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆಯಲ್ಲಿ ಭಾರೀ ಏರಿಕೆ ಮಾಡಿದ್ದು, ಸರ್ಕಾರಿ ನೌಕರರ ಮೊಗದಲ್ಲಿ ಸಂತಸ ನಲಿದಾಡಿದೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ. 3.75ರಷ್ಟು ಹೆಚ್ಚಿಸಲಾಗಿದೆ. ನೌಕರರು ಪಡೆಯುತ್ತಿರುವ ಮೂಲವೇತನಕ್ಕೆ ಈ ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಅನ್ವಯವಾಗಲಿದೆ.
ಅಕ್ಟೋಬರ್ ವೇತನದಲ್ಲೇ ಪರಿಷ್ಕೃತ ತುಟ್ಟಿ ಭತ್ಯೆ ಸರ್ಕಾರಿ ನೌಕರರ ಕೈ ಸೇರಲಿದೆ.
ಮೂರು ತಿಂಗಳ ಹಿಂಬಾಕಿಯನ್ನು ವೇತನದ ಜೊತೆಗೆ ಪಾವತಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಇಲ್ಲಿಯವರೆಗೆ ನೌಕರರು ತಮ್ಮ ಮೂಲ ವೇತನಕ್ಕೆ ಶೇ. 35ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದರು. ಇನ್ನು ಮುಂದೆ ಶೇ. 38.75ರಷ್ಟು ತುಟ್ಟಿಭತ್ಯೆ ಪಡೆಯಲಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1,109 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ಕೇಂದ್ರ ಸರ್ಕಾರದಿಂದಲೂ ತುಟ್ಟಿ ಭತ್ಯೆ ಹೆಚ್ಚಳ
ನಾಲ್ಕು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿತ್ತು. 2023ರ ಜುಲೈ 1ರಿಂದ ಅನ್ವಯವಾಗುವಂತೆ ಮೂಲ ವೇತನಕ್ಕೆ ಶೇ. 4ರಷ್ಟು ಹೆಚ್ಚಳ ಮಾಡಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿತ್ತು.
ಸರ್ಕಾರದ ಈ ನಿರ್ಧಾರದಿಂದ 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಸಂತಸಗೊಂಡಿದ್ದರು.