-->
ಸಿವಿಲ್ ವ್ಯಾಜ್ಯಗಳ ಶೀಘ್ರ ಇತ್ಯರ್ಥ- ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಸಿವಿಲ್ ವ್ಯಾಜ್ಯಗಳ ಶೀಘ್ರ ಇತ್ಯರ್ಥ- ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಸಿವಿಲ್ ವ್ಯಾಜ್ಯಗಳ ಶೀಘ್ರ ಇತ್ಯರ್ಥ- ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ



ಸಿವಿಲ್ ಪ್ರಕರಣಗಳ ವಿಚಾರಣೆ ಎಂದರೆ ಅದು ವರ್ಷಾನುಗಟ್ಟಲೆ ಎಂಬ ಪ್ರತೀತಿ ಎಲ್ಲೆಡೆ ಇದ್ದದ್ದೇ. ಆದರೆ, ಇದನ್ನು ತೊಡೆದು ಹಾಕಲು ಸುಪ್ರೀಂಕೋರ್ಟ್ ದಿಟ್ಟ ಕ್ರಮ ಕೈಗೊಂಡಿದೆ. ದೇಶಾದ್ಯಂತ ವಿವಿಧ ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳ ಶೀಘ್ರ ಇತ್ಯರ್ಥ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನ್ಯಾ. ಎಸ್. ರವೀಂದ್ರ ಭಟ್ ಮತ್ತು ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಸಿವಿಲ್ ವ್ಯಾಜ್ಯಗಳ ವಿಚಾರಣೆ ತಪ್ಪಿಸಲು ಮತ್ತು ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಜನ ನ್ಯಾಯಕ್ಕಾಗಿ ಕಾದು ರೋಸಿ ಹೋಗಿದ್ದಾರೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ. ಜಡತ್ವ ಮತ್ತು ಅಧಿಕಾರಶಾಹಿ ಅದಕ್ಷತೆಯನ್ನು ತೊಡೆದುಹಾಕುವುದು ಅಗತ್ಯವಾಗಿದೆ ಎಂದು ಖಾರವಾದ ಶಬ್ದಗಳಲ್ಲಿ ತೀರ್ಪು ನೀಡಿದ ನ್ಯಾಯಪೀಠ, ನಾವೀಗ ಕಾರ್ಯೋನ್ಮುಖರಾಗಬೇಕಿದೆ. ತಡವಾಗಿ ಹೋಗಿದ್ದರೂ ನ್ಯಾಯದ ಕರೆ ಅಚಲವಾಗಿದೆ. ನ್ಯಾಯಯುತ ಮತ್ತು ಸಮಾನ ಸಮಾಜದ ಭರವಸೆಯಲ್ಲಿ ಕಾನೂನಿನ ರಕ್ಷಕರಾಗಿ ನಾವು ಜನ ಇರಿಸಿದ ವಿಶ್ವಾಸವನ್ನು ಪುನರ್ ಸ್ಥಾಪಿಸಬೇಕಿದೆ. ನ್ಯಾಯದ ಅಂಗಳದಲ್ಲಿ ವಿಳಂಬ ಮತ್ತು ಪ್ರಕರಣ ಬಾಕಿ ಉಳಿಯದಂತೆ ನಾವು ನೋಡಿಕೊಳ್ಳಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

 

ಪ್ರಕರಣ: ಯಶಪಾಲ್ ಜೈನ್ Vs ಸುಶೀಲಾ ದೇವಿಮತ್ತಿತರರು (ಸುಪ್ರೀಂ ಕೋರ್ಟ್) Dated 20-10-2023

Ads on article

Advertise in articles 1

advertising articles 2

Advertise under the article