ಇ-ಸಮನ್ಸ್ ಸೇವೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ
ಇ-ಸಮನ್ಸ್ ಸೇವೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ ಇ-ಸಮನ್ಸ್ ಸೇವೆ ಆರಂಭವಾಗಿದೆ. ವಕೀಲರು ಮತ್ತು ಕಕ್ಷಿದಾರರ ಉಪಯೋಗಕ್ಕಾಗಿ ಈ ಸೇವೆ ಆರಂಭಿಸಲಾಗಿದೆ ಎಂದು ಬೆಂಗಳೂರಿನ ನಗರ ಸಿವಲ್ ನ್ಯಾಯಾಲಯದ ಮುಖ್ಯ ವಿಲೇಖಾಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯದಿಂದ ಜಾರಿಯಾಗುವ ನೋಟೀಸ್, ಸಮನ್ಸ್‌ಗಳನ್ನು ಪಿಡಿಎಫ್ ಮಾದರಿಯಲ್ಲಿ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಸಿಟಿ ಸಿವಿಲ್ ಕೋರ್ಟ್ ಮಾಡಿದೆ.
ಹೊಸ ಪ್ರಕರಣಗಳನ್ನು ದಾಖಲಿಸುವ ಸಮಯದಲ್ಲಿ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳ ವಿವರವನ್ನು ನೀಡಬಹುದು.
ಅದೇ ರೀತಿ, ಈಗ ಚಾಲ್ತಿಯಲ್ಲಿ ಇರುವ ಪ್ರಕರಣಗಳಲ್ಲೂ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳ ವಿವರವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿ ಕ್ಷಿಪ್ರ ನ್ಯಾಯದಾನ ಮಾಡುವ ವ್ಯವಸ್ಥೆ ಇದಾಗಿದೆ.