-->
ನ್ಯಾಯಾಲಯದ ವಿವಿಧ ಹುದ್ದೆಗೆ ನೇಮಕಾತಿ: 54 ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಯಾಲಯದ ವಿವಿಧ ಹುದ್ದೆಗೆ ನೇಮಕಾತಿ: 54 ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಯಾಲಯದ ವಿವಿಧ ಹುದ್ದೆಗೆ ನೇಮಕಾತಿ: 54 ಹುದ್ದೆಗಳಿಗೆ ಅರ್ಜಿ ಆಹ್ವಾನ



ದಕ್ಷಿಣ ಕನ್ನಡದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್, ಟೈಪಿಸ್ಟ್ ಹಾಗೂ ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ.

ಖಾಲಿ ಇರುವ ಹುದ್ದೆಗಳ ವಿವರ

ಶೀಘ್ರ ಲಿಪಿಗಾರರು (ಸ್ಟೆನೋಗ್ರಾಫರ್ ಗ್ರೇಡ್ -3) -10 ಹುದ್ದೆಗಳು

ಬೆರಳಚ್ಚುಗಾರರು – ಟೈಪಿಸ್ಟ್ – 02 ಹುದ್ದೆಗಳು

ಜವಾನ (Peon) – 36 ಹುದ್ದೆಗಳು

ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 06-11-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-12-2023

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಬಹುದು.

https://dk.dcourts.gov.in/notice-category/recruitments Dated 05-12-2023


ಆನ್ ಲೈನ್ ಹೊರತುಪಡಿಸಿ ಖುದ್ದಾಗಿ ಯಾ ಅಂಚೆ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ ಬಂದ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.

ಶೀಘ್ರ ಲಿಪಿಗಾರರು:

ವೇತನ ಶ್ರೇಣಿ:  27650/- ರಿಂದ 52650/-

ಶೈಕ್ಷಣಿಕ ಅರ್ಹತೆ: ಅರ್ಜಿ ನಿಗದಿಪಡಿಸಿದ ಕಡೆಯ ದಿನಾಂಕದ ಬಳಗಾಗಿ ಪಿಯುಸಿ ಪಾಸ್ ಆಗಿರಬೇಕು. ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಹಾಗೂ ಶಿಕ್ಷಣ ಇಲಾಖೆ ನಡೆಸುವ ಶೀಘ್ರ ಲಿಪಿಯಲ್ಲಿ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗಳ ಆಯ್ಕೆಯನ್ನು ಅಧೀನ ನ್ಯಾಯಾಲಯಗಳ ನೇಮಕಾತಿ ನಿಯಮಗಳ ಪ್ರಕಾರ ನೇಮಕಾತಿ ಮಾಡಲಾಗುವುದು.

ಬೆರಳಚ್ಚುಗಾರರು:

ವೇತನ ಶ್ರೇಣಿ:  21,400/- ರಿಂದ 42,000/-

 

ಶೈಕ್ಷಣಿಕ ಅರ್ಹತೆ: ಅರ್ಜಿ ನಿಗದಿಪಡಿಸಿದ ಕಡೆಯ ದಿನಾಂಕದ ಬಳಗಾಗಿ ಪಿಯುಸಿ ಪಾಸ್ ಆಗಿರಬೇಕು. ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಹಾಗೂ ಶಿಕ್ಷಣ ಇಲಾಖೆ  ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಜವಾನ:

ವೇತನ ಶ್ರೇಣಿ:  17,000/- ರಿಂದ 28,950/-

ಶೈಕ್ಷಣಿಕ ಅರ್ಹತೆ: ಅರ್ಜಿ ನಿಗದಿಪಡಿಸಿದ ಕಡೆಯ ದಿನಾಂಕದ ಬಳಗಾಗಿ SSLC ಪರೀಕ್ಷೆ ಪಾಸ್ ಆಗಿರಬೇಕು. ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಹಾಗೂ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

Ads on article

Advertise in articles 1

advertising articles 2

Advertise under the article