14 ಜಿಲ್ಲಾ ನ್ಯಾಯಾಧೀಶರ ಹುದ್ದೆ: ಅರ್ಜಿ ಸಲ್ಲಿಸಲು 17-11-2023 ಕೊನೆ ದಿನ
14 ಜಿಲ್ಲಾ ನ್ಯಾಯಾಧೀಶರ ಹುದ್ದೆ: ಅರ್ಜಿ ಸಲ್ಲಿಸಲು 17-11-2023 ಕೊನೆ ದಿನ
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 14 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 17-11-2023 ಕೊನೆ ದಿನವಾಗಿರುತ್ತದೆ.
13 ಬ್ಯಾಕ್‌ಲಾಗ್ ಹುದ್ದೆಗಳಿದ್ದು, ಒಂದು ಹೊಸದಾಗಿ ಖಾಲಿ ಇರುವ ಹುದ್ದೆಯಾಗಿರುತ್ತದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಕಾನೂನು ಪದವಿ ಪಡೆದಿರಬೇಕು. ಕರ್ನಾಟಕ ಹೈಕೋರ್ಟ್ ಅಥವಾ / ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಏಳು ವರ್ಷಗಳಿಗೆ ಮೀರುವಂತೆ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. (ಸರ್ಕಾರಿ ವಕೀಲರು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ವಿನಾಯಿತಿ ಇರುತ್ತದೆ.)
ಅಭ್ಯರ್ಥಿಯ ವಯಸ್ಸು ಅರ್ಜಿ ಹಾಕುವ ಸಮಯದಲ್ಲಿ 45 ಮೀರಿರಬಾರದು. ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಆರಂಭದ ದಿನ: 19-10-2023
ಅರ್ಜಿ ಸಲ್ಲಿಸಲು ಕೊನೆ ದಿನ : 17-11-2023
ಶುಲ್ಕ ಪಾವತಿಸಲು ಕೊನೆ ದಿನ: 18-11-2023
ಹೆಚ್ಚಿನ ವಿವರಗಳಿಗೆ ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆಯನ್ನು ನೋಡಬಹುದು.
https://karnatakajudiciary.kar.nic.in/recruitment.php