ಎರಡು ನಿಮಿಷದ ಲೈಂಗಿಕ ಸುಖಕ್ಕೆ ಜೀವನ ಹಾಳು ಮಾಡಬೇಡಿ: ಯುವತಿಯರಿಗೆ ಹೈಕೋರ್ಟ್ ಕಿವಿಮಾತು
ಎರಡು ನಿಮಿಷದ ಲೈಂಗಿಕ ಸುಖಕ್ಕೆ ಜೀವನ ಹಾಳು ಮಾಡಬೇಡಿ: ಯುವತಿಯರಿಗೆ ಹೈಕೋರ್ಟ್ ಕಿವಿಮಾತು
ಯುವತಿಯರು ಎರಡು ನಿಮಿಷದ ಲೈಂಗಿಕ ಸುಖಕ್ಕೆ ತಮ್ಮ ಜೀವನ ಹಾಳು ಮಾಡಕೊಳ್ಳಬೇಡಿ. ನಿಮ್ಮ ಲೈಂಗಿಕ ಆಸಕ್ತಿಯನ್ನು ನಿಗ್ರಹಿಸಿಕೊಳ್ಳಬೇಕು ಎಂದು ಕೊಲ್ಕತ್ತಾ ಹೈಕೋರ್ಟ್ ಪ್ರಕರಣವೊಂದರಲ್ಲಿ ಯುವತಿಯರಿಗೆ ಕಿವಿಮಾತು ಹೇಳಿದೆ.
20 ವರ್ಷದ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ಗೆಳತಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ಪ್ರಕರಣದಲ್ಲಿ ಆತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಹದಿ ಹರೆಯದಲ್ಲಿ ಎರಡು ನಿಮಿಷಗಳ ದೈಹಿಕ ಸುಖಕ್ಕಾಗಿ ಲೈಂಗಿಕ ಸಂಪರ್ಕ ನಡೆಸಿದರೆ ಅದು ಕಾನೂನು ಪ್ರಕಾರ ಅಪರಾಧ. ಹಾಗೂ ಆರೋಗ್ಯಕರ ಸಮಾಜಕ್ಕೂ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿತು.
ಈ ನಿಟ್ಟಿನಲ್ಲಿ ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಅತಿ ಅಗತ್ಯವಾಗಿದೆ. ಹದಿ ಹರೆಯದ ಯುವತಿಯರು ತಮ್ಮ ಬಯಕೆಗಳನ್ನು ನಿಗ್ರಹಿಸಿಕೊಳ್ಳಬೇಕು. ಹಾಗೆಯೇ ಹದಿಹರೆಯದ ಯುವಕರೂ ಯುವತಿಯರನ್ನು ಗೌರವ ಭಾವದಿಂದ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು.
ಜೊತೆಗೆ ವಿಚಾರಣಾ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು.