-->
ಸಹಜೀವನ ಅಸ್ಥಿರ, ತಾತ್ಕಾಲಿಕ: ಲಿವ್ ಇನ್ ಜೋಡಿಗೆ ಪೊಲೀಸ್ ರಕ್ಷಣೆ ಕೋರಿದ್ದ ಅರ್ಜಿಗೆ ಹೈಕೋರ್ಟ್‌ ತಿರಸ್ಕಾರ

ಸಹಜೀವನ ಅಸ್ಥಿರ, ತಾತ್ಕಾಲಿಕ: ಲಿವ್ ಇನ್ ಜೋಡಿಗೆ ಪೊಲೀಸ್ ರಕ್ಷಣೆ ಕೋರಿದ್ದ ಅರ್ಜಿಗೆ ಹೈಕೋರ್ಟ್‌ ತಿರಸ್ಕಾರ

ಸಹಜೀವನ ಅಸ್ಥಿರ, ತಾತ್ಕಾಲಿಕ: ಲಿವ್ ಇನ್ ಜೋಡಿಗೆ ಪೊಲೀಸ್ ರಕ್ಷಣೆ ಕೋರಿದ್ದ ಅರ್ಜಿಗೆ ಹೈಕೋರ್ಟ್‌ ತಿರಸ್ಕಾರ






ಲಿವ್ ಇನ್ ಸಂಬಂಧ ತಾತ್ಕಾಲಿಕ ಮತ್ತು ಸಮಯ ಕಳೆಯುವ ಉದ್ದೇಶದಿಂದ ಕೂಡಿದ್ದು, ಇಂತಹ ಸಂಬಂಧಗಳಲ್ಲಿ ಸ್ಥಿರತೆ ಮತ್ತು ಪ್ರಾಮಾಣಿಕತೆಯ ಕೊರತೆ ಇದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಅಂತರ್‌ಧರ್ಮೀಯ ಸಹಜೀವನ ಜೋಡಿಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದೆ.



ಯುವಕನ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣವನ್ನು ರದ್ದುಪಡಿಸಬೇಕು ಹಾಗೂ ತಮಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೋರಿ ಅಂತರ್‌ಧರ್ಮೀಯ ಸಹಜೀವನ ಜೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರಾಹುಲ್ ಚತುರ್ವೇದಿ ಮತ್ತು ನ್ಯಾ. ಮೊಹಮ್ಮದ್ ಅಜರ್ ಹುಸೇನ್ ಇದ್ರಿಸ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.



ಜೀವನ ಎಂಬುದು ಗುಲಾಬಿಯ ಹಾಸಿಗೆಯಲ್ಲ. ಜೀವನ ಎಂಬುದು ಕಠಿಣ ವಾಸ್ತವತೆ. ಎಲ್ಲರ ದಾಂಪತ್ಯ ಜೀವನದಲ್ಲೂ ಕ್ಲಿಷ್ಟ ಪರಿಸ್ಥಿತಿಗಳು ಕಠಿಣ ಪರೀಕ್ಷೆಗೊಳಪಡಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, 20-22 ವರ್ಷ ವಯಸ್ಸಿನ ಜೋಡಿ ತಮ್ಮ ಎರಡು ತಿಂಗಳ ಅವಧಿಯ ತಾತ್ಕಾಲಿಕ ಸಂಬಂಧದ ಬಗ್ಗೆ ಗಂಭೀರವಾಗಿರುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ರೀತಿಯ ಸಂಬಂಧ ಸಾಮಾನ್ಯವಾಗಿ ಕಾಲ ಕಳೆಯುವ ಹಾಗೂ ತಾತ್ಕಾಲಿಕ ಉದ್ದೇಶದಿಂದ ಕೂಡಿದ್ದಾಗಿರಬಹುದು ಎಂದು ಹೇಳಿದೆ.



ಲಿವ್ ಇನ್ ಸಂಬಂಧಗಳಿಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಆದರೆ, ಜೋಡಿಯು ವಿವಾಹ ಆಗುವುದಕ್ಕೆ ಒಪ್ಪದಿದ್ದರೆ ಅಥವಾ ಪರಸ್ಪರರ ವಿಚಾರವಾಗಿ ಪ್ರಾಮಾಣಿಕತೆ ಬೆಳೆಸಿಕೊಳ್ಳದಿದ್ದರೆ ಅಂತಹ ಸಂಬಂಧಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಕೋರ್ಟ್ ಮುಂದಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article