NI Act: ಚೆಕ್ ಅಮೌಲ್ಯ ಪ್ರಕರಣ: ಕಂಪೆನಿ ಪ್ರತಿನಿಧಿ ಸಾಕ್ಷಿಗೆ ದೂರಿನ ಅಂಶ ಗೊತ್ತಿರಬೇಕೇ?- ಹೈಕೋರ್ಟ್ ತೀರ್ಪು
NI Act: ಚೆಕ್ ಅಮೌಲ್ಯ ಪ್ರಕರಣ: ಕಂಪೆನಿ ಪ್ರತಿನಿಧಿ ಸಾಕ್ಷಿಗೆ ದೂರಿನ ಅಂಶ ಗೊತ್ತಿರಬೇಕೇ?- ಹೈಕೋರ್ಟ್ ತೀರ್ಪು
ಚೆಕ್ ಅಮೌಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯನ್ನು ಪ್ರತಿನಿಧಿಸುವ ಅಧಿಕೃತ ಸಾಕ್ಷಿಗೆ ಕಂಪೆನಿ ಪರವಾಗಿ ಸಲ್ಲಿಸಲಾಗಿರುವ ದೂರಿನ ಅಂಶದ ಬಗ್ಗೆ ಸಮಗ್ರ ಮಾಹಿತಿ ಇರಬೇಕು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಸಿ.ಎಸ್. ಡಯಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಅಧಿಕೃತ ಕಂಪೆನಿಯನ್ನು ಪ್ರತಿನಿಧಿಸುವ ಅಧಿಕಾರ ಪತ್ರ ಹೊಂದಿರುವ ಸಾಕ್ಷಿಯು ದೂರುದಾರರ ಪರವಾಗಿ ಪ್ರಮಾಣೀಕೃತ ಸಾಕ್ಷ್ಯ ಹೇಳಲು ಶಕ್ತರಾಗಿರಬೇಕು. ವ್ಯವಹಾರದ ಬಗ್ಗೆ, ಚೆಕ್ ಅಮಾನ್ಯಗೊಂಡ ಬಗ್ಗೆ ಹಾಗೂ ದೂರಿನಲ್ಲಿ ದಾಖಲಿಸಿದ ಅಂಶಗಳ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ನ್ಯಾಯಪೀಠ ಹೇಳಿದೆ.
ನಾರಾಯಣನ್ ಎ.ಸಿ. Vs ಮಹಾರಾಷ್ಟ್ರ (2013) ಮತ್ತು ಮೆ. ಟಿಆರ್.ಎಲ್ ಕ್ರೊಸಕಿ ರಿಫ್ಯಾಕ್ಟೊರೀಸ್ Vs ಎಸ್‌ಎಂಎಸ್ ಏಶ್ಯಾ ಪ್ರೈ. ಲಿ. (2022)ರ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ ಸದ್ರಿ ಪ್ರಕರಣಕ್ಕೆ ಈ ಮೇಲಿನ ಪ್ರಕರಣದಲ್ಲಿ ನೀಡಲಾದ ತೀರ್ಪುಗಳು ಅನ್ವಯವಾಗುತ್ತದೆ ಎಂದು ಹೇಳಿದೆ.
ಕಂಪೆನಿ ಹಣ ಸ್ವೀಕರಿಸುವ ಸ್ಥಾನದಲ್ಲಿ ಇದ್ದರೆ ಅದರ ಅಧಿಕೃತ ಉದ್ಯೋಗಿ ಎನ್.ಐ. ಕಾಯ್ದೆಯ ಅಡಿಯಲ್ಲಿ ದಾಖಲಾಗುವ ದೂರನ್ನು ಪ್ರತಿನಿಧಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ
ಪ್ರಕರಣ: Popular Motor Corporation v. State of Kerala & Anr. (ಕೇರಳ ಹೈಕೋರ್ಟ್)