ಎರಡು ನ್ಯಾಯಾಲಯಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯಕ್ಕೆ ಅವಕಾಶವಿಲ್ಲ- ಗ್ರಾಹಕರ ಆಯೋಗ
ಎರಡು ನ್ಯಾಯಾಲಯಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯಕ್ಕೆ ಅವಕಾಶವಿಲ್ಲ- ಗ್ರಾಹಕರ ಆಯೋಗ
ಒಂದೇ ವ್ಯಾಜ್ಯವನ್ನು ಮುಂದಿಟ್ಟುಕೊಂಡು ಎರಡು ವಿಭಿನ್ನ ನ್ಯಾಯಾಲಯಗಳಲ್ಲಿ ನ್ಯಾಯ ಕೋರಿ ಅರ್ಜಿ ಸಲ್ಲಿಸಲಾಗದು ಎಂದು ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.
ಅಪಾರ್ಟ್‌ಮೆಂಟಿನ ಖರೀದಿದಾರರು ಗ್ರಾಹಕರ ನ್ಯಾಯಾಲಯ ಇಲ್ಲವೇ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಎರಡು ವಿಭಿನ್ನ ನ್ಯಾಯಾಲಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಎರಡು ಕಡೆಗಳಲ್ಲೂ ಅರ್ಜಿ ಹಾಕಿ ನ್ಯಾಯ ಕೋರುವುದು ಅಸಮಂಜಸ ಎಂದು ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.
ವ್ಯಾಜ್ಯಕಾರರು ಯಾವುದಾದರೂ ಒಂದು ಕಡೆ ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ನ್ಯಾ. ರಾಮ್ ಸೂರತ್ ರಾಮ್ ಮೌರ್ಯ ಹಾಗೂ ಆಯೋಗದ ಸದಸ್ಯ ಭರತ್ ಕುಮಾರ್ ಪಾಂಡ್ಯ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಎರಡೂ ಕಡೆಗಳಲ್ಲಿ ಅರ್ಜಿ ಹಾಕುವುದರಿಂದ ವ್ಯತಿರಿಕ್ತ ತೀರ್ಪುಗಳು ಬರಬಹುದು. ಇದೇ ವೇಳೆ, ದಾವೆಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಾಣಲು ಸಾಧ್ಯವಿದೆ. ಹಾಗಾಗಿ, ಎರಡೂ ಕಡೆ ದಾವೆ ಸಲ್ಲಿಸುವುದು ಸರಿಯಲ್ಲ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.