-->
ಅವಿಭಕ್ತ ಹಿಂದೂ ಆಸ್ತಿ: 'ಕರ್ತ'ನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಹೊಸ ವ್ಯಾಖ್ಯೆ

ಅವಿಭಕ್ತ ಹಿಂದೂ ಆಸ್ತಿ: 'ಕರ್ತ'ನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಹೊಸ ವ್ಯಾಖ್ಯೆ

ಅವಿಭಕ್ತ ಹಿಂದೂ ಆಸ್ತಿ: 'ಕರ್ತ'ನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಹೊಸ ವ್ಯಾಖ್ಯೆ






ಅವಿಭಕ್ತ ಹಿಂದೂ ಕುಟುಂಬದ ಆಸ್ತಿಯ ವರ್ಗಾವಣೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹಿರಿಯ ಸದಸ್ಯ ಯಾನೆ 'ಕರ್ತ'ನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಹೊಸ ವ್ಯಾಖ್ಯೆ ಬರೆದಿದೆ.


ನ್ಯಾ. ಸಂಜೀವ ಖನ್ನಾ ಹಾಗೂ ನ್ಯಾ. ಎಸ್.ವಿ. ಎನ್. ಭಟ್ಟ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಹಿಂದೂ ಅವಿಭಕ್ತ ಕುಟುಂಬವು ತನ್ನ ಆಸ್ತಿಯನ್ನು ಕರ್ತ ಅಥವಾ ಅದರ ಹಿರಿಯ ವಯಸ್ಕ ಸದಸ್ಯನ ಮೂಲಕ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಆಸ್ತಿಯ ಮೇಲೆ ಕರ್ತನು ಹೊಂದಿರುವ ಹಕ್ಕಿನ ವಿಚಾರವನ್ನು ಈಗಾಗಲೇ ನಿರ್ಣಯಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.



ಹಿಂದೂ ಅವಿಭಕ್ತ ಕುಟುಂಬದ ಕರ್ತನಾದ ತಮ್ಮ ತಂದೆಯವರು ಕುಟುಂಬದ ಆಸ್ತಿಯನ್ನು ಅಡಮಾನ ಇಟ್ಟಿದ್ದಾರೆ ಎಂದು ದೂರಿ ಎನ್.ಎಸ್. ಬಾಲಾಜಿ ಎಂಬುವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.



ಮದ್ರಾಸ್ ಹೈಕೋರ್ಟ್‌ ಬಾಲಾಜಿ ಅವರ ಅರ್ಜಿಯನ್ನು ತಳ್ಳಿ ಹಾಕಿ ಜುಲೈ 31ರಂದು ತೀರ್ಪು ನೀಡಿತ್ತು. ಈ ಅರ್ಜಿಯನ್ನು ಪ್ರಶ್ನಿಸಿ ಬಾಲಾಜಿ ಅವರು ರಜಾ ಕಾಲದ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.



ಮದ್ರಾಸ್ ಹೈಕೋರ್ಟ್ ತೀರ್ಪು ಸರಿಯಾಗಿದ್ದು, ತೀರ್ಪಿಗೆ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.


Ads on article

Advertise in articles 1

advertising articles 2

Advertise under the article