IPC, CrPC, Evidence Act: ಮೂರು ನೂತನ ವಿಧೇಯಕಗಳಿಗೆ ಸಂಸತ್ತಿನ ಸ್ಥಾಯಿ ಸಮಿತಿ ಅನುಮೋದನೆ
IPC, CrPC, Evidence Act: ಮೂರು ನೂತನ ವಿಧೇಯಕಗಳಿಗೆ ಸಂಸತ್ತಿನ ಸ್ಥಾಯಿ ಸಮಿತಿ ಅನುಮೋದನೆ
ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಬದಲಿಸುವ ಕೇಂದ್ರ ಸರ್ಕಾರದ ಹೊಸ ಮೂರು ವಿಧೇಯಕಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಅಂಗೀಕಾರ ನೀಡಿದೆ.
ಸಂಸತ್ತಿನ ಕಳೆದ ಮುಂಗಾರು ಅಧಿವೇಶನದಲ್ಲಿ ಗೃಹ ಸಚಿವಾಲಯ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹೆಸರಿನ ಮೂರು ನೂತನ ವಿಧೇಯಕಗಳನ್ನುಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಈ ಮೂರು ವಿಧೇಯಕಗಳನ್ನು ಹೆಚ್ಚಿನ ಅಧ್ಯಯನಕ್ಕೊಳಪಡಿಸುವ ನಿಟ್ಟಿನಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಜವಾಬ್ದಾರಿ ನೀಡಲಾಗಿತ್ತು. ಬಿಜೆಪಿ ಸಂಸದ ಬೃಜ್ ಲಾಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
ಮೂರು ತಿಂಗಳ ಅಧ್ಯಯನ, ಸಮಾಲೋಚನೆ ಬಳಿಕ ವಿಧೇಯಕಗಳ ಕರಡನ್ನು ಅಂಗೀಕರಿಸಲಾಯಿತು. ಮೂರು ವಿಧೇಯಕಗಳಿಗೆ ಈ ಸಮಿತಿಯ ಸದಸ್ಯರು ನೀಡಿದ ಕೆಲವೊಂದು ತಿದ್ದುಪಡಿಗಳನ್ನು ಸೇರಿಸಲಾಗಿದೆ. ಆದರೆ, ವಿಧೇಯಕಗಳಿಗೆ ಸೂಚಿಸಲಾಗಿರುವ ಹಿಂದಿ ಹೆಸರನ್ನು ಸಮಿತಿಯ ಕೆಲ ಸದಸ್ಯರ ವಿರೋಧದ ನಡುವೆಯೂ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.