-->
ಸಹೋದ್ಯೋಗಿ ವಕೀಲೆಗೆ ಲೈಂಗಿಕ ಕಿರುಕುಳ: ಆರೋಪಿ ವಕೀಲರು ವೃತ್ತಿಯಿಂದಲೇ ಸಸ್ಪೆಂಡ್‌!

ಸಹೋದ್ಯೋಗಿ ವಕೀಲೆಗೆ ಲೈಂಗಿಕ ಕಿರುಕುಳ: ಆರೋಪಿ ವಕೀಲರು ವೃತ್ತಿಯಿಂದಲೇ ಸಸ್ಪೆಂಡ್‌!

ಸಹೋದ್ಯೋಗಿ ವಕೀಲೆಗೆ ಲೈಂಗಿಕ ಕಿರುಕುಳ: ಆರೋಪಿ ವಕೀಲರು ವೃತ್ತಿಯಿಂದಲೇ ಸಸ್ಪೆಂಡ್‌!





ಸಹೋದ್ಯೋಗಿ ಮಹಿಳಾ ವಕೀಲರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ವಕೀಲರ 'ಸನದು' ಕರ್ನಾಟಕ ರಾಜ್ಯ ವಕೀಲರ ಪರಿಷತ್ತು(KSBC) ತಾತ್ಕಾಲಿಕವಾಗಿ ಅಮಾನತು ಮಾಡಿ ಆದೇಶ ಹೊರಡಿಸಿದೆ.



ಬೆಂಗಳೂರಿನ ವಕೀಲರಾದ ಎಚ್. ಮಂಜುನಾಥ್ (46 ವರ್ಷ ಪ್ರಾಯ) ಎಂಬವರೇ ಅಮಾನತುಗೊಂಡ ವಕೀಲರಾಗಿದ್ದಾರೆ.


ಅವರು ತಮ್ಮ ಸಹೋದ್ಯೋಗಿ ಕಿರಿಯ ಮಹಿಳಾ ವಕೀಲರೊಬ್ಬರ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪ ಹಾಗೂ ಕೊಲೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.

ಸದ್ರಿ ಈ ಆರೋಪದ ಕುರಿತ ವಿಚಾರಣೆಯನ್ನು ರಾಜ್ಯ ವಕೀಲರ ಪರಿಷತ್ತು ತನ್ನ ಶಿಸ್ತು ಸಮಿತಿಗೆ ವಹಿಸಿದ್ದು, ಈ ಸಮಿತಿಯ ವಿಚಾರಣೆ ಮುಗಿಯುವ ವರೆಗೆ ಅವರು ವಕೀಲ ವೃತ್ತಿ ನಡೆಸದಂತೆ ಕೆಎಸ್‌ಬಿಸಿ ಆದೇಶ ಹೊರಡಿಸಿದೆ.


ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.


ಆರೋಪಿ ವಕೀಲ ಮಂಜುನಾತ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಮಹಿಳಾ ವಕೀಲರೊಬ್ಬರು ರಾಜ್ಯ ವಕೀಲರ ಪರಿಷತ್ತಿಗೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ವಿಚಾರಣೆಗೆ ಎತ್ತಿಕೊಂಡ ಕೆಎಸ್‌ಬಿಸಿ, ಆರೋಪಿ ವಕೀಲರಿಗೆ ನೋಟೀಸ್ ಜಾರಿಗೊಳಿಸಿತ್ತು. 5-10-2023ರಂದು ಆರೋಪಿ ಮಂಜುನಾಥ್ ಅವರು ವಕೀಲರ ಪರಿಷತ್ತಿಗೆ ಪತ್ರ ಬರೆದು ತಮ್ಮ ವಿವರಣೆ ಸಲ್ಲಿಸಲು 10ರಿಂದ 14 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ, 30 ದಿನ ಕಳೆದರೂ ಆರೋಪಿ ವಕೀಲರು ತಮ್ಮ ವಿರುದ್ಧದ ದೂರಿಗೆ ಸೂಕ್ತ ವಿವರಣೆ ಯಾ ಆಕ್ಷೇಪಣೆ ನೀಡಲು ಸಾಧ್ಯವಾಗಿರಲಿಲ್ಲ.


ಈ ಬಗ್ಗೆ ದೂರುದಾರರಾದ ಸಂತ್ರಸ್ತ ವಕೀಲರು ನೀಡಿದ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ವಕೀಲರ ಪರಿಷತ್ತು, ಆರೋಪಿಯು ಮಹಿಳಾ ವಕೀಲರಿಗೆ ಲೈಂಗಿಕ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರ ಜೊತೆಗೆ ಜೀವ ಬೆದರಿಕೆ ಹಾಕಿರುವುದು ಮತ್ತು ವೃತ್ತಿಪರತೆಗೆ ವಿರುದ್ಧವಾಗಿ ವರ್ತಿಸಿರುವುದು ಮತ್ತು ವೃತ್ತಿಯ ಘನತೆಯನ್ನು ಕಳೆಯುವಂಥ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕೆಎಸ್‌ಬಿಸಿ ಹೇಳಿದೆ.


ಈ ಹಿನ್ನೆಲೆಯಲ್ಲಿ ಆರೋಪಿ ವಕೀಲರ ಸನದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.




Ads on article

Advertise in articles 1

advertising articles 2

Advertise under the article