ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡುವ ಜಾಲ ಸಕ್ರಿಯ- ಸ್ವಲ್ಪ ಯಾಮಾರಿದ್ರೂ ಆಪತ್ತು! ಮೋಸ ಹೋಗುವ ಹಲವು ವಿಧಗಳು ಇಲ್ಲಿವೆ... ಎಚ್ಚೆತ್ತುಕೊಳ್ಳಿ!
ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡುವ ಜಾಲ ಸಕ್ರಿಯ- ಸ್ವಲ್ಪ ಯಾಮಾರಿದ್ರೂ ಆಪತ್ತು! ಮೋಸ ಹೋಗುವ ಹಲವು ವಿಧಗಳು ಇಲ್ಲಿವೆ... ಎಚ್ಚೆತ್ತುಕೊಳ್ಳಿ!
ಸಾಮಾಜಿಕ ಜಾಲತಾಣದಲ್ಲಿ ನಂಬಿಸಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಯಾರದ್ದೋ ಫೋಟೋ ಹಾಕಿ ತಮ್ಮತ್ತ ಸೆಳೆಯುವ ವಂಚಕರು ನಿಮ್ಮನ್ನು ಯಾಮಾರಿಸುತ್ತಾರೆ. ಬಲೆ ಬಿದ್ದರೆ ನಿಮಗೆ ಆಪತ್ತು ತಪ್ಪಿದ್ದಲ್ಲ.
ಎಷ್ಟೋ ಪ್ರಕರಣಗಳಲ್ಲಿ ನಿಮ್ಮ ಫೇಸ್‌ಬುಕ್ ಯಾ ವಾಟ್ಸ್ಯಾಪ್ ಫ್ರೆಂಡ್ ಲಿಸ್ಟ್‌ನಲ್ಲಿ ಇರುವ ಗೆಳೆಯರ ಸೋಗಿನಲ್ಲಿ ಅರ್ಜೆಂಟ್‌ಆಗಿ ಹಣ ಬೇಕು, ವರ್ಗಾವಣೆ ಮಾಡಿ ಎಂದು ಕೇಳಿ ಮೋಸ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಗೆಳೆಯರನ್ನು ಫೋನ್ ಮೂಲಕ ಸಂಪರ್ಕ ಮಾಡಿ ಅಗತ್ಯವಿದ್ದರೆ ಸಹಾಯ ಮಾಡಬಹುದು.
ಇನ್ನು ಹಲವು ಪ್ರಕರಣಗಳಲ್ಲಿ, ಉತ್ತಮ ಕೆಲಸ ಇದೆ ಎಂದೋ... ಸೆಕೆಂಡ್ ಹ್ಯಾಂಡ್ ಫರ್ನಿಚರ್, ವಾಹನ ಇದೆ ಎಂದೋ ಮೋಸದ ಜಾಲ ಹೆಣೆಯುತ್ತಾರೆ. ಇಂತಹ ಸಂದರ್ಭದಲ್ಲಿ ವಾಸ್ತವಾಂಶವನ್ನು ಪರಿಶೀಲಿಸಿ ಮುಂದುವರಿದರೆ ಉತ್ತಮ.
ಇನ್ನು ಎಷ್ಟೋ ಸಂದರ್ಭಗಳಲ್ಲಿ ಚೆಂದದ ಯುವತಿಯರ ಫೋಟೋ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಖಾತೆ ತೆರೆದು ಅಮಾಯಕರನ್ನು ಸೆಳೆಯುತ್ತಾರೆ. ಅವರನ್ನು ಬೆತ್ತಲೆ ಆಗುವಂತೆ ಪ್ರೇರೇಪಿಸುತ್ತಾರೆ. ಆ ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಸುಲಭವಾಗಿ ಹಣ ಕೊಳ್ಳೆ ಹೊಡೆಯುತ್ತಾರೆ.
ಇಂತಹ ವಂಚಕರ, ಅಕ್ರಮ ಚಟುವಟಿಕೆ ಮಾಡುವವರ ಜಾಲವೇ ಸಾಮಾಜಿಕ ಜಾಲದಲ್ಲಿ ಸಕ್ರಿಯವಾಗಿದೆ.
ಎಷ್ಟೋ ಮಂದಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ವಕೀಲರು, ಪೊಲೀಸರು, ವೈದ್ಯರು, ನಿವೃತ್ತ ನೌಕರರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಉದ್ಯಮಿಗಳು, ಖಾಸಗಿ ಕಂಪೆನಿ ನೌಕರರು ಈ ಮೋಸದ ವಂಚನೆಯ ಜಾಲಕ್ಕೆ ಬೀಳುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡಿರುವ ನಿದರ್ಶನವಿದೆ.