-->
ಸನಾತನ ಧರ್ಮ ಹೇಳಿಕೆ: ಹೈಕೋರ್ಟ್‌ಗೆ ಉದಯನಿಧಿ ಸ್ಟಾಲಿನ್ ನೀಡಿದ ವಿವರಣೆ ಇದು..!

ಸನಾತನ ಧರ್ಮ ಹೇಳಿಕೆ: ಹೈಕೋರ್ಟ್‌ಗೆ ಉದಯನಿಧಿ ಸ್ಟಾಲಿನ್ ನೀಡಿದ ವಿವರಣೆ ಇದು..!

ಸನಾತನ ಧರ್ಮ ಹೇಳಿಕೆ: ಹೈಕೋರ್ಟ್‌ಗೆ ಉದಯನಿಧಿ ಸ್ಟಾಲಿನ್ ನೀಡಿದ ವಿವರಣೆ ಇದು..!





ಸನಾತನ ಧರ್ಮ ಕುರಿತು ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಉದಯನಿಧಿ ಸ್ಟಾಲಿನ್ ಮದ್ರಾಸ್ ಹೈಕೋರ್ಟ್‌ಗೆ ವಿವರಣೆ ನೀಡಿದ್ದಾರೆ.


ಹಿಂದು ಮುನ್ನಾನಿ ಸಮೂಹವು ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅನಿತಾ ಸುಮಂತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಎದುರು ದಯಾನಿಧಿ ಈ ಸಮಜಾಯಿಷಿ ನೀಡಿದ್ದಾರೆ.


ಹಿಂದೂಗಳ ಜೀವನ ಕ್ರಮದ ಬಗ್ಗೆ ಅವಹೇಳನ ಮಾಡಿ ತಾವು ಯವುದೇ ಹೇಳಿಕೆ ನೀಡಿಲ್ಲ. ಜಾತಿ ವ್ಯವಸ್ಥೆಯನ್ನು ವಿರೋಧಿಸಿ ತಾವು ಸನಾತನ ಧರ್ಮ ಕುರಿತಾದ ಹೇಳಿಕೆ ನೀಡಿದ್ದೇನೆ ಎಂದು ಉದಯನಿಧಿ ಹೇಳಿದ್ದಾರೆ.


ನನ್ನ ಹೇಳಿಕೆ ಕೇವಲ ಸನಾತನ ಧರ್ಮದ ಒಳಗಿನ ಜಾತಿ ವ್ಯವಸ್ಥೆ ಕುರಿತು ಮಾತ್ರ. ಹಿಂದೂ ಧರ್ಮ ಮತ್ತು ಹಿಂದೂ ಜೀವನ ಕ್ರಮದ ಬಗ್ಗೆ ಈ ಹೇಳಿಕೆಯಲ್ಲಿ ಪ್ರಸ್ತಾಪಿಸಿಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.


ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರ ವಿರುದ್ಧ ಹಿಂದೂ ಮುನ್ನನಿ ತಂಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ಅನಿತಾ ಸುಮಂತ್ ಅವರಿದ್ದ ಏಕಸದಸ್ಯ ಪೀಠ ಕೈಗೆತ್ತಿಕೊಂಡಿದೆ.



Ads on article

Advertise in articles 1

advertising articles 2

Advertise under the article