ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ ಅಸ್ತಂಗತ
ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ ಅಸ್ತಂಗತ
ಎಂ. ಫಾತೀಮಾ ಬೀವಿ, ದೇಶದ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ತಮ್ಮ 96ನೇ ಇಳಿ ವಯಸ್ಸಿನಲ್ಲಿ ಅಸ್ತಂಗತರಾಗಿದ್ದಾರೆ. ಭಾರತದ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನ್ಯಾ. ಫಾತೀಮಾ ಬೀವಿ, ಏಷ್ಯಾದ ದೇಶವೊಂದರ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕೇರಳ ಮೂಲದ ಫಾತಿಮಾ ಬೀವಿ ಜನಿಸಿದ್ದು 1927ರಲ್ಲಿ. ಕಾನೂನು ಅಧ್ಯಯನಕ್ಕೆ ತಂದೆ ಹಾಗೂ ಕುಟುಂಬದಿಂದ ಪ್ರೋತ್ಸಾಹ ಸಿಕ್ಕಿತ್ತು.ವಕೀಲರ ಪರಿಷತ್ ಪರೀಕ್ಷೆಯಲ್ಲಿ ಅವರು ಅಗ್ರಸ್ಥಾನ ಪಡೆದಿದ್ದರು. ಅದೂ ಒಂದು ದಾಖಲೆಯೇ ಸರಿ. ಅಲ್ಲಿ ತನಕ ವಕೀಲರ ಪರಿಷತ್‌ನಿಂದ ಚಿನ್ನದ ಪದಕವನ್ನು ಯಾವೊಬ್ಬ ಮಹಿಳೆಯೂ ಪಡೆದಿರಲಿಲ್ಲ.!
ಕೇರಳದ ಪಟ್ಟಣಂತಿಟ್ಟ ಗ್ರಾಮದಲ್ಲಿ ಜನಿಸಿದ್ದ ಅವರು 1974ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ಆಗಿ ನ್ಯಾಯಾಂಗ ಸೇವೆಯನ್ನು ಆರಂಭಿಸಿದ್ದರು. 1983ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
1989ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ದೇಶದ ಮೊದಲ ಮಹಿಳಾ ನ್ಯಾಯಮೂರ್ತಿ ಎಂಬ ಗೌರವಕ್ಕೆ ಪಾತ್ರರಾದರು.
1993ರಲ್ಲಿ ನಿವೃತ್ತರಾದ ನಂತರ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ನಂತರ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದರು.