ಎಚ್ಚರಿಕೆ! ಬ್ಯಾಂಕ್ ಚೆಕ್ ಬುಕ್ ಬಳಸುವವರು ತಪ್ಪದೇ ಗಮನಿಸಬೇಕಾದ ವಿಷಯ: ಈ ರೀತಿ ಮಾಡಿದರೆ ಸಂಕಷ್ಟ ಗ್ಯಾರಂಟಿ!
ಎಚ್ಚರಿಕೆ! ಬ್ಯಾಂಕ್ ಚೆಕ್ ಬುಕ್ ಬಳಸುವವರು ತಪ್ಪದೇ ಗಮನಿಸಬೇಕಾದ ವಿಷಯ: ಈ ರೀತಿ ಮಾಡಿದರೆ ಸಂಕಷ್ಟ ಗ್ಯಾರಂಟಿ!
ಇದು ಡಿಜಿಟಲ್ ಯುಗ. ಬ್ಯಾಂಕ್‌ಗೆ ಹೋಗದೆಯೇ ನಿಮ್ಮ ಬ್ಯಾಂಕ್ ಖಾತೆಯಿಂದ ನಿಮಗೆ ಬೇಕಾದವರಿಗೆ, ಅಥವಾ ಇಚ್ಚೆ ಪಟ್ಟ ಯಾವುದೇ ಬ್ಯಾಂಕ್ ಖಾತೆಗೆ ಹಣ ಹಾಕಬಹುದು.
ಡಿಜಿಟಲ್ ಬ್ಯಾಂಕ್ ವರ್ಗಾವಣೆಯಿಂದ ಬಹುತೇಕ ಮಂದಿ ಬ್ಯಾಂಕ್‌ಗೆ ಹೋಗುವುದು, ಎಟಿಎಂಗೆ ಹೋಗಿ ಹಣ ಪಡೆಯುವ ಪ್ರವೃತ್ತಿ ಕಡಿಮೆಯಾಗಿದೆ.
ಆದರೆ, ಬ್ಯಾಂಕ್‌ನಲ್ಲಿ ಖಾತೆ ಇದ್ದು, ಆ ಖಾತೆಯ ಬಾಬ್ತು ಚೆಕ್ ಬುಕ್ ಪಡೆದವರು ಗಮನಿಸಲೇ ಬೇಕಾದ ಕೆಲವು ಮಹತ್ವದ ವಿಷಯಗಳು ಇಲ್ಲಿದೆ.
1) ನೀವು ಪಡೆದುಕೊಂಡ ಚೆಕ್‌ನ್ನು ಯಾರಿಗೂ ಸಿಗದ ಹಾಗೆ ಮುಂಜಾಗ್ರತೆ ವಹಿಸಿಕೊಳ್ಳಿ.
2) ಒಂದು ವೇಳೆ, ಚೆಕ್ ಬುಕ್ (cheque book) ಅಥವಾ ಚೆಕ್ ಹಾಳೆ (cheque leaf) ಕಳೆದುಹೋಗಿದ್ದರೆ, ಮಿಸ್ ಪ್ಲೇಸ್ ಆಗಿದ್ದರೆ ತಕ್ಷಣ ಹುಡುಕಿ. ಅದು ಸಿಗದೇ ಇದ್ದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ ಆ ಚೆಕ್ ಬುಕ್ ಅಥವಾ ಚೆಕ್ ಹಾಳೆಯನ್ನು ಮಾನ್ಯ ಮಾಡದಂತೆ ಲಿಖಿತ ಸೂಚನೆ ನೀಡಿ.
3) ಒಂದು ವೇಳೆ, ಯಾವುದೇ ಕೈ ಸಾಲಕ್ಕೆ ಭದ್ರತೆಗಾಗಿ, ಅಥವಾ ಮರುಪಾವತಿ ಖಾತ್ರಿಗಾಗಿ ಚೆಕ್ ನೀಡಿದ್ದರೆ ನೀವು ಮರುಪಾವತಿ ಮಾಡಿದ ತಕ್ಷಣ ಆ ಚೆಕ್‌ನ್ನು ವಾಪಸ್ ಪಡೆದುಕೊಳ್ಳಿ. ಹೀಗೆ ಮಾಡಿದರೆ, ಹಣ ಮರುಪಾವತಿ ಆದ ಬಳಿಕವೂ ಚೆಕ್ ದುರುಪಯೋಗ ಮಾಡುವ ಸಾಧ್ಯತೆಯನ್ನು ತಪ್ಪಿಸಬಹುದು.
4) ನಿಮ್ಮ ಸ್ನೇಹಿತರಿಗೆ, ಆಪ್ತರಿಗೆ ಸಹಿ ಮಾಡಿದ ಚೆಕ್ ನೀಡಬೇಡಿ. ಇದರಿಂದ ಯಾವುದೇ ಸಂದರ್ಭದಲ್ಲೂ ಅನಗತ್ಯ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.
5) ಚೆಕ್ ಬುಕ್ ಅಥವಾ ಚೆಕ್ ಹಾಳೆಯನ್ನು ಅತ್ಯಂತ ಜಾಗರೂಕತೆಯಿಂದ ಇಟ್ಟುಕೊಳ್ಳಿ. ಸಹಿ ಹಾಕಿದ ಚೆಕ್‌ನ್ನು ಯಾವುದೇ ಕಾರಣಕ್ಕೂ ಓಪನ್ ಪ್ಲೇಸ್‌ನಲ್ಲಿ ಬಹಿರಂಗವಾಗಿ ಇಡಬೇಡಿ.
6) ಆಪ್ತರು, ಸ್ನೇಹಿತರು ಪಡೆದುಕೊಳ್ಳುವ ಸಾಲಕ್ಕೆ ಶೂರಿಟಿಯಾಗಿ, ಗ್ಯಾರಂಟರ್ ಆಗಿ ಸಹಿ ಹಾಕಿದ್ದ ಸಂದರ್ಭದಲ್ಲಿ ಚೆಕ್ ನೀಡಿದ್ದರೆ ಅವರ ಸಾಲ ಮರುಪಾವತಿಯಾಗದಿದ್ದರೆ ಅದನ್ನು ದಂಡನಾ ಬಡ್ಡಿ ಸಹಿತ ಕಟ್ಟುವ ಹೊಣೆ ನಿಮ್ಮದಾಗಿರುತ್ತದೆ. ಇಂತಹ ರಿಸ್ಕ್ ನಿಮ್ಮ ಮೇಲೆ ಸದಾ ಇರುತ್ತದೆ.