ಗ್ರಾಹಕರಿಗೆ ಅಂಚೆ ಇಲಾಖೆಯ ಶಾಕ್ ನ್ಯೂಸ್: ದುಬಾರಿಯಾದ ರಿಜಿಸ್ಟರ್ಡ್ ಪೋಸ್ಟ್
Thursday, November 2, 2023
ಗ್ರಾಹಕರಿಗೆ ಅಂಚೆ ಇಲಾಖೆಯ ಶಾಕ್ ನ್ಯೂಸ್: ದುಬಾರಿಯಾದ ರಿಜಿಸ್ಟರ್ಡ್ ಪೋಸ್ಟ್
ಅಂಚೆ ಇಲಾಖೆ ದೇಶಾದ್ಯಂತ ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಮೂಲಕ ಬಿಸಿ ಮುಟ್ಟಿಸಿದೆ. ತನ್ನ ಪ್ರಮುಖ ಸೇವೆಗಳಲ್ಲಿ ಒಂದಾಗಿರುವ ನೋಂದಾಯಿತ ಅಂಚೆ ಸೇವೆ (ರಿಜಿಸ್ಟರ್ಡ್ ಪೋಸ್ಟ್) ದರವನ್ನು ಗಣನೀಯ ಪ್ರಮಾಣದಲ್ಲಿ ಏರಿಸುವ ಮೂಲಕ ನವೆಂಬರ್‌ನಿಂದ ಗ್ರಾಹಕರಿಗೆ ಶಾಕ್ ನೀಡಿದೆ.
ಈ ಹಿಂದೆ, ಸ್ವೀಕೃತಿ ಪತ್ರ ಸಹಿತ ಇರುವ ನೋಂದಾಯಿತ ಅಂಚೆ ಸೇವೆ(ರಿಜಿಸ್ಟರ್ಡ್ ಪೋಸ್ಟ್)ಗೆ ರೂ. 25/- ವೆಚ್ಚ ಆಗುತ್ತಿತ್ತು.
ಈಗ ಅದರ ದರವನ್ನು ರೂ. 25/- ನಿಂದ ರೂ. 30/-ಕ್ಕೇರಿಸಲಾಗಿದೆ. ಈ ಸೇವೆಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಅನ್ವಯ ಮಾಡಿರುವುದರಿಂದ ನೋಂದಾಯಿತ ಅಂಚೆ ಸೇವೆಯಲ್ಲಿ ದರ ಏರಿಕೆಯಾಗಿದೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ, ಪೋಸ್ಟ್ ಕಾರ್ಡ್, ಸಾಮಾನ್ಯ ಅಂಚೆ ಬೆಲೆಗಳಲ್ಲಿ ಯಾವುದೇ ಏರಿಕೆಯಾಗಿಲ್ಲ ಎಂಬುದು ಗ್ರಾಹಕರಿಗೆ ನೆಮ್ಮದಿ ತರಿಸಿದೆ.