ರಾಜ್ಯಪಾಲರು ಕೇವಲ ರಾಜ್ಯದ ಸಾಂಕೇತಿಕ ಮುಖ್ಯಸ್ಥರು: ಕೇರಳ ರಾಜ್ಯಪಾಲರಿಗೆ ಸುಪ್ರೀಂ ಪಾಠ
ರಾಜ್ಯಪಾಲರು ಕೇವಲ ರಾಜ್ಯದ ಸಾಂಕೇತಿಕ ಮುಖ್ಯಸ್ಥರು: ಕೇರಳ ರಾಜ್ಯಪಾಲರಿಗೆ ಸುಪ್ರೀಂ ಪಾಠ
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಕುರಿತು ವ್ಯವಹರಿಸುವಾಗ ರಾಜ್ಯಪಾಲರ ಅಧಿಕಾರದ ಸೀಮಿತತೆ ಬಗ್ಗೆ ಸುಪ್ರೀಂ ಕೋರ್ಟ್ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರಿಗೆ ಪಾಠ ಮಾಡಿದೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಓದಿ ರಾಜ್ಯಪಾಲರ ಸೀಮಿತ ಅಧಿಕಾರದ ಬಗ್ಗೆ ತಿಳಿದುಕೊಳ್ಳುವಂತೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಮೂಲಕ ಕೇರಳ ರಾಜ್ಯಪಾಲರ ಕಿವಿ ಹಿಂಡಿದೆ.
ರಾಜ್ಯಪಾಲರು ಕೇವಲ ರಾಜ್ಯದ ಸಾಂಕೇತಿಕ ಮುಖ್ಯಸ್ಥರು. ಶಾಸಕಾಂಗಗಳ ಕಾನೂನು ರೂಪಿಸುವ ಅಧಿಕಾರವನ್ನು ಅವರು ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಪಂಜಾಬ್ ರಾಜ್ಯಪಾಲರ ವಿಚಾರದಲ್ಲಿ ನೀಡಿದ ತೀರ್ಪನ್ನು ಓದಿ ಮನದಟ್ಟು ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ಮಧ್ಯೆ, ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಸುಪ್ರೀಂ ಅಂಗಳದಲ್ಲಿ ಬಾಕಿ ಇದೆ. ಈ ಪ್ರಕರಣದಲ್ಲೂ ರಾಜ್ಯಪಾಲರು ವಿಧಾನಸಭೆ ಅಂಗೀಕರಿಸಿದ ಸುಮಾರು 12 ಮಸೂದೆಗಳನ್ನು ತಡೆ ಹಿಡಿದಿರುವುದನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.