ವಕೀಲರ ಕಚೇರಿಗೆ 'ವಾಣಿಜ್ಯ ವಿದ್ಯುತ್ ಸಂಪರ್ಕ' : ಹೈಕೋರ್ಟ್ ಮಹತ್ವದ ತೀರ್ಪು
ವಕೀಲರ ಕಚೇರಿಗೆ 'ವಾಣಿಜ್ಯ ವಿದ್ಯುತ್ ಸಂಪರ್ಕ': ಹೈಕೋರ್ಟ್ ಮಹತ್ವದ ತೀರ್ಪು
ವಕೀಲರ ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆ ಸಂಪರ್ಕವನ್ನು 'ವಾಣಿಜ್ಯ ವಿದ್ಯುತ್ ಸಂಪರ್ಕ' ಎಂದು ಪರಿಗಣಿಸಬಾರದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
MORE ARTICLE
ವಕೀಲರ ಸೇವಾ ವೃತ್ತಿಯನ್ನು ವಾಣಿಜ್ಯ ಸೇವೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಸೇವಾ ವಲಯದಲ್ಲಿ ಬರುತ್ತದೆ. ಹಾಗಾಗಿ, ವಕೀಲರ ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಅದನ್ನು ವಾಣಿಜ್ಯ ವಿದ್ಯುತ್ ಸಂಪರ್ಕ ಎಂದು ಪರಿಗಣಿಸಬಾರದು ಎಂದು ನ್ಯಾಯಪೀಠ ಹೇಳಿದೆ.
ವಕೀಲರ ಕಾಯ್ದೆ 1961ನ್ನು ಉಲ್ಲೇಖಿಸಿದ ನ್ಯಾ. ರವೀಂದ್ರ ಘುಗೆ ಮತ್ತು ನ್ಯಾ. ವೈ.ಜಿ. ಖೋಬ್ರಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ವಕೀಲ ವೃತ್ತಿ ಒಂದು ಉದಾತ್ತ ಕಾನೂನು ಸೇವೆಯಾಗಿದೆ. ಅದನ್ನು ವ್ಯಾಪಾರ ಅಥವಾ ವಾಣಿಜ್ಯ ಸೇವೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ವಕೀಲರ ಕಚೇರಿಗೆ ನೀಡುವ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಸೇವೆಯಡಿ ಪಟ್ಟಿ ಮಾಡಲಾಗದು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಆಯೋಗ (MERC) ಪರ ವಕೀಲರು ವಾದ ಮಂಡಿಸಿ, ವಕೀಲರೂ ವಾಣಿಜ್ಯ ಗ್ರಾಹಕರ ವ್ಯಾಪ್ತಿಯಡಿ ಬರುತ್ತಾರೆ. MERC ತನ್ನ ಪ್ರದತ್ತ ಅಧಿಕಾರ ಬಳಸಿ ವಕೀಲರ ಸಮುದಾಯವನ್ನು ವಾಣಿಜ್ಯ ಬಳಕೆದಾರರ ಪಟ್ಟಿಗೆ ಸೇರಿಸಿದೆ ಎಂದು ಹೇಳಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ, ವಕೀಲರ ಕಚೇರಿಗೆ ವಿದ್ಯುತ್ ಸಂಪರ್ಕ ವಾಣಿಜ್ಯ ಪಟ್ಟಿಯಲ್ಲಿ ಮಾಡದಂತೆ ಆದೇಶ ಹೊರಡಿಸಿದರು.