-->
ವಕೀಲರ ಸಂರಕ್ಷಣಾ ಕಾಯ್ದೆಗೆ ಅಂಗೀಕಾರ: ಕಾಯ್ದೆಯ ಪ್ರಮುಖ ಅಂಶಗಳು..

ವಕೀಲರ ಸಂರಕ್ಷಣಾ ಕಾಯ್ದೆಗೆ ಅಂಗೀಕಾರ: ಕಾಯ್ದೆಯ ಪ್ರಮುಖ ಅಂಶಗಳು..

ವಕೀಲರ ಸಂರಕ್ಷಣಾ ಕಾಯ್ದೆಗೆ ಅಂಗೀಕಾರ: ಕಾಯ್ದೆಯ ಪ್ರಮುಖ ಅಂಶಗಳು..





ವಕೀಲರ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಅಂಗೀಕಾರ ಪಡೆದುಕೊಂಡಿದೆ.



ಈ ಪ್ರಸ್ತಾಪಿತ ಕಾಯ್ದೆ ಪ್ರಕಾರ ವಕೀಲರ ಮೇಲೆ ಅಪರಾಧ ಎಸಗುವ ಪ್ರತಿಯೊಬ್ಬ ಅಪರಾಧಿಯು ಆರು ತಿಂಗಳಿನಿಂದ ಮೂರು ವರ್ಷದ ವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಅಥವಾ ಒಂದು ಲಕ್ಷ ರೂಪಾಯಿ ದಂಡನೆಗೆ ಒಳಗಾಗುತ್ತಾರೆ. ಅಥವಾ ಈ ಎರಡನ್ನೂ ವಿಧಿಸಬಹುದಾದ ಶಿಕ್ಷೆಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.


ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು.


ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ವಕೀಲರ ಮೇಲೆ ಹಲ್ಲೆ, ದೌರ್ಜನ್ಯದಂತ ಅಪರಾಧಗಳು ನಡೆದರೆ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಅಂತಹ ವ್ಯಕ್ತಿಗಳನ್ನು ಈ ಕಾಯ್ದೆ ಪ್ರಕಾರ ವಿಚಾರಣೆ ಬಳಿಕ ದಂಡನೆಗೆ ಗುರಿಪಡಿಸಬಹುದು.


ಸಂಜ್ಞೇಯ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ವಕೀಲರನ್ನು ಪೊಲೀಸರು ಬಂಧಿಸಿದಾಗ ಅಂತಹ ಬಂಧನದ 24 ಗಂಟೆಯ ಒಳಗೆ ಆರೋಪಿತ ವಕೀಲರು ಸದಸ್ಯರಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಮಾಹಿತಿ ನೀಡತಕ್ಕದ್ದು.


ದಂಡನೀಯವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಗಳಿಗೆ ಕಡಿಮೆ ಇರದ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಎಂದು ಕಾಯ್ದೆಯಲ್ಲಿ ವಿಧಿಸಲಾಗಿದೆ.


Ads on article

Advertise in articles 1

advertising articles 2

Advertise under the article