ದಸ್ತಾವೇಜು ಬರಹಗಾರನ ಕರಾಮತ್ತು: ನಕಲಿ ಜಿಪಿಎ ಮೂಲಕ ಜಮೀನು ವರ್ಗಾವಣೆ- ಕ್ರಯಸಾಧನ ರದ್ದುಗೊಳಿಸಿ ಕೋರ್ಟ್ ತೀರ್ಪು!
ದಸ್ತಾವೇಜು ಬರಹಗಾರನ ಕರಾಮತ್ತು: ನಕಲಿ ಜಿಪಿಎ
ಮೂಲಕ ಜಮೀನು ವರ್ಗಾವಣೆ- ಕ್ರಯಸಾಧನ ರದ್ದುಗೊಳಿಸಿ ಕೋರ್ಟ್ ತೀರ್ಪು!
ನಕಲಿ ಅಧಿಕಾರ ಪತ್ರ (ಜಿಪಿಎ)ವನ್ನು ಬಳಸಿ
ಜಮೀನಿನ ಕ್ರಯ ಸಾಧನ ಸಿದ್ಧಪಡಿಸಿರುವ ಮತ್ತು ಅಕ್ರಮ ವರ್ಗಾವಣೆ ಮೂಲಕ ತಮ್ಮ ಸ್ವಂತ ಹೆಸರಿಗೆ ಕ್ರಯ
ಸಾಧನ ಮೂಲಕ ಪರಭಾರೆ ಮಾಡಿಕೊಂಡಿದ್ದ ದಸ್ತಾವೇಜು ಬರಹಗಾರರ ವಿರುದ್ಧ ಮಂಗಳೂರು ನ್ಯಾಯಾಲಯ ತೀರ್ಪು
ನೀಡಿದೆ.
ಅಕ್ರಮ ವರ್ಗಾವಣೆಯ ವಿವಾದಿತ ಕ್ರಯ ಸಾಧನವನ್ನು
ರದ್ದುಗೊಳಿಸಿ ತೀರ್ಪು ನೀಡಿದ ಮಂಗಳೂರು ನ್ಯಾಯಾಲಯ, ಸಂತ್ರಸ್ತ ಪಕ್ಷಕಾರರಿಗೆ ಪರಿಹಾರ ನೀಡುವಂತೆ
ಎದುರುದಾರ ಪಕ್ಷಕಾರರಾದ ದಸ್ತಾವೇಜು ಬರಹಗಾರ ಮತ್ತು ಇನ್ನೊಬ್ಬರಿಗೆ ಆದೇಶ ನೀಡಿದೆ.
ಇದೇ ವೇಳೆ, ದಸ್ತಾವೇಜು ಬರಹಗಾರರಾದ ಎಂ.ಎಸ್.
ಶೆಟ್ಟಿ ಸರಪಾಡಿ ಅವರ ದಸ್ತಾವೇಜು ಲೈಸನ್ಸ್ ರದ್ದು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ನೋಂದಣಾಧಿಕಾರಿಯವರಿಗೆ
ದೂರು ಸಲ್ಲಿಸಲಾಗಿದೆ.
ಪ್ರಕರಣದ ವಿವರ:
2004ರಲ್ಲಿ ಮೈಸೂರಿನ ರವಿ ಆರ್. ಅವರು ಮೈಸೂರಿನ
ರಮೇಶ್ ಅವರಿಗೆ ಮಾರಾಟ ಮಾಡಿದ್ದರು. ಆ ಕ್ರಯಸಾಧನ ದಸ್ತಾವೇಜನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಕಚೇರಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ದಸ್ತಾವೇಜು ಬರಹಗಾರ ಎಂ.ಎಸ್. ಶೆಟ್ಟಿ ಸರಪಾಡಿ ತಯಾರಿಸಿದ್ದರು. ಆ ನಂತರ ಈ ಜಮೀನನ್ನು ಕಲ್ಲಾಜೆ ಮೋಹನದಾಸ್ ರೈ ಎಂಬವರು ಖರೀದಿಸಿದ್ದರು.
ಆದರೆ, 2013ರಲ್ಲಿ ದಸ್ತಾವೇಜು ಬರಹಗಾರರಾದ
ಎಂ.ಎಸ್. ಸರಪಾಡಿ ಅವರು ಸುರೇಶ್ ಕುಮಾರ್ ಜೊತೆ ಸೇರಿ
ಯಾದವ ಪುತ್ರನ್ ಎಂಬವರ ಹೆಸರಿನಲ್ಲಿ ನಕಲಿ ಅಧಿಕಾರ ಪತ್ರ – GPA ತಯಾರಿಸಿ ಕಲ್ಲಾಜೆ ಮೋಹನದಾಸ್ ರೈ
ಅವರಿಗೆ ಸೇರಿದ ಜಮೀನನ್ನು ತನ್ನ ಸ್ವಂತ ಹೆಸರಿಗೆ ಕ್ರಯ ಸಾಧನ ಮೂಲಕ ವರ್ಗಾವಣೆ ಮಾಡಿಕೊಂಡಿದ್ದರು.
ಇದು ಕಲ್ಲಾಜೆ ಮೋಹನದಾಸ್ ರೈ ಅವರ ಗಮನಕ್ಕೆ ಬಂದಿತ್ತು.
ಕೂಡಲೇ ಅವರು ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ
ದೂರು ನೀಡಿದ್ದರು. ಬಳಿಕ ಪ್ರಕರಣಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಜಮೀನಿನ ಖಾತಾ ದಸ್ತಾವೇಜನ್ನು
ಸ್ತಂಬನಗೊಳಿಸಲಾಗಿತ್ತು.
ಮಂಗಳೂರಿನ 2ನೇ ಹಿರಿಯ ಹೆಚ್ಚುವರಿ ಹಿರಿಯ
ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ನಕಲಿ ಅಧಿಕಾರ ಪತ್ರ
ಜಿಪಿಎ ಮೂಲಕ ಮಾಡಲಾಗಿದ್ದ ಕ್ರಯ ಸಾಧನವನ್ನು ರದ್ದುಗೊಳಿಸಿ ತೀರ್ಪು ನೀಡಿದರು.
ಕಲ್ಲಾಜೆ ಮೋಹನದಾಸ್ ರೈ ಅವರ ಪರವಾಗಿ ನ್ಯಾಯವಾದಿ
ನಿಕೇಶ್ ಶೆಟ್ಟಿ ವಾದ ಮಂಡಿಸಿದ್ದರು.